ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎರಡು ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಸ.ಉ.ಹಿ.ಪ್ರಾ.ಶಾಲೆ ನರಿಮೊಗರಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರಿನ ಪ್ರಾಥಮಿಕ ಬಾಲಕರ ವಿಭಾಗ ಮತ್ತು 8ನೇ ತರಗತಿಯ ಬಾಲಕರ ವಿಭಾಗವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿಶಾಂತ್ ಕೆ ಜಿ 100 ಮೀ ಪ್ರಥಮ, 200 ಮೀ ಪ್ರಥಮ, ರಿಲೇ ಪ್ರಥಮ, ವಿಕಾಸ್ 600ಮೀ ಪ್ರಥಮ, ಶಾಟ್ ಫುಟ್ ಪ್ರಥಮ, 400 ಮೀ ದ್ವಿತೀಯ, ರಿಲೇ ಪ್ರಥಮ, ಮಧ್ವರಾಜ್ ಎಚ್ ವಿ ಉದ್ದಜಿಗಿತ ದ್ವಿತೀಯ, ರಿಲೇ ಪ್ರಥಮ, ಕುಮಾರ ಸುಬ್ರಹ್ಮಣ್ಯ 200ಮೀ ತೃತೀಯ, ರಿಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಎಂಟನೇ ತರಗತಿಯ ವಿಭಾಗದಲ್ಲಿ ಆಂಗ್ಲ ಮಾಧ್ಯಮದ ಬಾಲಕರು ಸಮರ್ಥ್ ಪಿ ಉದ್ದಜಿಗಿತ ಪ್ರಥಮ, 100 ಮೀ ಪ್ರಥಮ,200ಮೀ ದ್ವಿತೀಯ, ರಿಲೇ ದ್ವಿತೀಯ, ದಕ್ಷ ಎಂ ಡಿ ರಿಲೇ ದ್ವಿತೀಯ, ಕಿಶನ್ ರಿಲೇ ದ್ವಿತೀಯ, ಕಿಶನ್ ಕೆ ಎನ್ ರಿಲೇ ದ್ವಿತೀಯ, ಆಂಗ್ಲ ಮಾಧ್ಯಮದ ಬಾಲಕಿಯ ವಿಭಾಗದಲ್ಲಿ ಅನನ್ಯ ರೈ ಪಿ 100 ಮೀ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ ಮಾಧ್ಯಮದ ಬಾಲಕರ ವಿಭಾಗದಲ್ಲಿ ಪ್ರೇಕ್ಷಕ್ ಸಿ 400 ಮೀ ಪ್ರಥಮ, 600 ಮೀ ಪ್ರಥಮ, ಲಿಖಿತ್ ಎತ್ತರಜಿಗಿತ ಪ್ರಥಮ, 600 ಮೀ ದ್ವಿತೀಯ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ, ಆಂಗ್ಲ ಮಾಧ್ಯಮದ ಬಾಲಕರು ಜಿತೇಶ್ ಸಿ ಟ್ರಿಪಲ್ ಜಂಪ್ ಪ್ರಥಮ, ರಿಲೇ ಪ್ರಥಮ, ಮಹಮ್ಮದ್ ಫಾಝಿಲ್ 100ಮೀ ತೃತೀಯ, ರಿಲೇ ಪ್ರಥಮ, ರೂಪೇಶ್ ರೈ 400 ಮೀ ಪ್ರಥಮ, 800 ಮೀ ದ್ವಿತೀಯ, 200 ಮೀ ತೃತೀಯ, ರಿಲೇ ಪ್ರಥಮ, ಸಾತ್ವಿಕ್ ರಿಲೇ ಪ್ರಥಮ, ಜೀವನ್ ಎಂ ಪಿ 1500 ಮೀ ಪ್ರಥಮ, 3000 ಮೀ ತೃತೀಯ, ಕಾರ್ತಿಕ್ 3000 ಮೀ ದ್ವಿತೀಯ, 1500 ಮೀ ತೃತೀಯ, ಕನ್ನಡ ಮಾಧ್ಯಮದಲ್ಲಿ ಮಹಮ್ಮದ್ ರಿಜ್ವಾನ್ ಎತ್ತರ ಜಿಗಿತ ದ್ವಿತೀಯ.
ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಧನಲಕ್ಷ್ಮಿ ಸಿ ಎಮ್ 800 ಮೀ ಪ್ರಥಮ, 400 ಮೀ ದ್ವಿತೀಯ, ದೇಚಮ್ಮ ಬಿ ಎಮ್ ಎತ್ತರಜಿಗಿತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಮತ್ತು ವನಿತಾ ತರಬೇತಿ ನೀಡಿರುತ್ತಾರೆ.
ವಿಜೇತರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ , ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ,ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here