ಪುತ್ತೂರು: ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಧನ್ವಿತ್ ಅವರು ಕೆನಡಾದ ವಿಂಡ್ಸರ್ನಲ್ಲಿ ಸೆ. 13ರಿಂದ 17ರವರೆಗೆ ನಡೆದ ಕಾಮನ್ ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿ ಸಾಧನೆಗೈದಿದ್ದಾರೆ.
4×25 ಮೀಟರ್ ಮನಿಕಿನ್ ಕ್ಯಾರಿ ರಿಲೆಯಲ್ಲಿ 8ನೇ ಸ್ಥಾನ, 4×50 ಮಿಡ್ಲೆ ರಿಲೆಯಲ್ಲಿ 7ನೇ ಸ್ಥಾನ ಹಾಗೂ 200 ಮೀಟರ್ ಒಬ್ಸ್ಟೆಕಲ್ ಸ್ವಿಮ್ನಲ್ಲಿ 15ನೇ ಸ್ಥಾನ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ. ಮರೀಲಿನ ಕೇಶವ ಕುಮಾರ್ ಕೆ ಎಂ ಮತ್ತು ಮೀನಾಕ್ಷಿ ದಂಪತಿ ಪುತ್ರನಾದ ಧನ್ವಿತ್ ಇವರು, ಪುತ್ತೂರು ಬಾಲವನ ಈಜು ಕೊಳದ ನುರಿತ ತರಬೇತುದಾರ ರೋಹಿತ್ ಪಿ, ದೀಕ್ಷಿತ್ ರಾವ್, ಪಾರ್ಥ ವಾರಣಾಸಿ ಮತ್ತು ನಿರೂಪ್ ಜಿ.ಆರ್ ಅವರಿಂದ ತರಬೇತಿ ಪಡೆದಿದ್ದರು.