ಪುತ್ತೂರು: ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ವಿದ್ಯುತ್ ಮಾರ್ಗದ ಕಾಮಗಾರಿ ಪುಣಚ ಗ್ರಾಮದ ಬೈರಿಕಟ್ಟೆಯಿಂದ ಆರಂಭವಾಗಿದ್ದು, ಇಲಾಖೆ ವಿರುದ್ದ ಪರಿಸರದ ರೈತಾಪಿವರ್ಗದವರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿದ್ದು, ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಮಾಜಿ ಶಾಸಕರು ಕಾಮಗಾರಿಗಳನ್ನು ನಿಲ್ಲಿಸುವಂತೆ ಮತ್ತು ಈ ಭಾಗದ ರೈತರ ಸಭೆ ಕರೆದು ಚರ್ಚಿಸುವಂತೆ ತಿಳಿಸಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿದ ಡಿ.ಸಿಯವರು ಕಾಮಗಾರಿಯನ್ನು ನಿಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ ಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ವಿಟ್ಲ ಬಿಜೆಪಿ ಪ್ರಮುಖ ಕರುಣಾಕರ ನಾಯ್ತೊಟ್ಟು, ಪುಣಚ ಪಂಚಾಯತ್ ಸದಸ್ಯರಾದ ಅಶೋಕ್ ಮೂಡಂಬೈಲು, ತೀರ್ಥರಾಮ್ ರೈತ ಮುಖಂಡ ಸಂಜೀವ ಗೌಡ ಮೊದಲಾದವರು ಉಪಸ್ಥಿತರಿದ್ದರು.