





ನೆಲ್ಯಾಡಿ: ಧರ್ಮಾಧ್ಯಕ್ಷ ಪೀಠಾರೋಹಣ ದೀಕ್ಷೆಯ ರಜತ ಮಹೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅವರಿಗೆ ಇಚ್ಲಂಪಾಡಿ ಸಂತ ಲಿಟ್ಟಿಲ್ ಫ್ಲವರ್ ಚರ್ಚ್ ವತಿಯಿಂದ ಅ.8ರಂದು ಸಾರ್ವಜನಿಕ ಸನ್ಮಾನ ಮಾಡಲಾಯಿತು.



ಕೆಎಸ್‌ಎಂಸಿಎ ನಿರ್ದೇಶಕ, ಧರ್ಮಗುರುಗಳೂ ಆದ ವಂ.ಶಾಜಿ ಮಾಥ್ಯುರವರು ಧರ್ಮಪ್ರಾಂತ್ಯದ ಪ್ರಾರಂಭದಿಂದ ಇಲ್ಲಿಯವರೆಗೆ ನಡೆದು ಬಂದ ಸಾಧನೆ ಹಾದಿಯ ಕಿರು ಪರಿಚಯವನ್ನು ಮಾಡಿದರು. ಈ ಸಂದರ್ಭದಲ್ಲಿ ಚರ್ಚ್‌ನ ನಾಲ್ವರು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸ್ವೀಕರಣೆ ವಿಧಿಯನ್ನು ಧರ್ಮಾಧ್ಯಕ್ಷರು ನೆರವೇರಿಸಿದರು. ಧರ್ಮಪ್ರಾಂತ್ಯದ ಚಾನ್ಸಲರ್ ವಂ.ಫಾ. ಲಾರೆನ್ಸ್ ಪೂಣೊಲಿಲ್, ಸಹ ಧರ್ಮಗುರು ಫಾ.ಬಿಪಿನ್, ಚರ್ಚ್‌ನ ಪಾಲನಾ ಸಮಿತಿ ಸದಸ್ಯರಾದ ತಂಬಿ, ಜೈಸನ್, ಜೋನಿ, ಶೈನ್ ಪಿ.ಜೋನ್, ಪ್ರಕಾಶ್, ಪ್ರಿನ್ಸ್, ಎಲಿಯಾಸ್, ತೋಮಸ್‌ರವರು ಉಪಸ್ಥಿತರಿದ್ದರು.














