ಪುತ್ತೂರು : ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದಿಂದ ಶಿಶಿಕ್ಷು ಅಧಿನಿಯಮದಡಿ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಐಟಿಐ ಅಭ್ಯರ್ಥಿಗಳಿಗೆ ಲಭ್ಯವಿರುವ ಸ್ಥಾನಗಳು: ಒಂದು ವರ್ಷ ಅವಧಿಯ ಮೆಕ್ಯಾನಿಕಲ್ ಡೀಸೆಲ್ 40 ಸ್ಥಾನ, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್ 10 ಸ್ಥಾನ, ಇಲೆಕ್ಟಿಶಿಯನ್ 18 ಸ್ಥಾನ, ಮೋಟರ್ ಮೆಕ್ಯಾನಿಕ್ ವೆಹಿಕಲ್ 19 ಸ್ಥಾನ, ವೆಲ್ಡರ್ 5 ಸ್ಥಾನ, ಫಿಟ್ಟರ್ 5 ಸ್ಥಾನ, ಪಾಸಾ 10 ಸ್ಥಾನ.ಎಸೆಸೆಲ್ಸಿ ಅಭ್ಯರ್ಥಿಗಳಿಗೆ 2 ವರ್ಷ ಅವಧಿಗೆ ಮೆಕ್ಯಾನಿಕ್ ಡೀಸೆಲ್ ನಲ್ಲಿ 29 ಸ್ಥಾನಗಳು ಲಭ್ಯವಿರುತ್ತವೆ.
ಅರ್ಹ ಅಭ್ಯರ್ಥಿಗಳು ವೆಬ್ಸೈಟ್ www.apprenticeshipindia.org ನ ಹೋಮ್ಪೇಜ್ ಗೆ ಹೋಗಿ ರಿಜಿಸ್ಟ್ರೇಷನ್ನಲ್ಲಿ ಕ್ಯಾಂಡಿಡೇಟ್ ರಿಜಿಸ್ಟ್ರೇಷನ್’ನಲ್ಲಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ಇಮೇಲ್ನಲ್ಲಿ ಆಕ್ಟಿವೇಶನ್ ಮಾಡಿದ ನಂತರ ಇಮೇಲ್ ಯೂಸರ್ ಐಡಿ ಮತ್ತು ಇಮೇಲ್ ಪಾಸ್ವರ್ಡ್-ಲಾಗಿನ್ ಪಾಸ್ವರ್ಡ್ ಆಗಿರುತ್ತದೆ. ನಂತರ ಕ್ಯಾಂಡಿಡೇಟ್ ಡ್ಯಾಶ್ ಬೋರ್ಡ್ನಲ್ಲಿ ಪೂರ್ಣ ವಿವರಗಳನ್ನು ನಮೂದಿಸಿ ಸಂಬಂಧಿಸಿದ ದಾಖಲಾತಿಗಳನ್ನು ಅಪೇಟ್ ಮಾಡಿ ಪ್ರೊಫೈಲ್ಗಳನ್ನು ಶೇ.100 ಪೂರ್ಣಗೊಳಿಸಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಚೇರಿಯಿಂದ ನೀಡುವ ಅರ್ಜಿ ಭರ್ತಿಗೊಳಿಸಿ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾ ನಿಗಮ ವಿಭಾಗಿಯ ಕಚೇರಿ, ಪುತ್ತೂರು ವಿಭಾಗ ಮುಕ್ರಂಪಾಡಿ ದರ್ಬೆ ಅಂಚೆ ಪುತ್ತೂರು ಇಲ್ಲಿಗೆ ನೇರ ಸಂದರ್ಶನಕ್ಕೆ ನವೆಂಬರ್ 4ರಂದು ಹಾಜರಾಗಬೇಕು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.