ಪುತ್ತೂರು: ಪರ್ಲಡ್ಕ ಬಾಲವನ ಬಯಲು ರಂಗಮಂದಿರದಲ್ಲಿ ಅ.10ರಂದು ನಡೆದ ಡಾ.ಕೋಟಾ ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಿಗಳು ರಚಿಸಿದ ಕನ್ನಡದ ಹಾಡಿಗೆ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಶಾಸ್ತ್ರೀಯ ನೃತ್ಯದ ಪ್ರಯೋಗ ವಿಶೇಷವಾಗಿ ಮೂಡಿ ಬಂದಿದೆ.
ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಕೋಟಾ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ನಡೆದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.
ಕನ್ನಡದ ಕವಿಗಳು ರಚಿಸಿರುವ ಕಾವ್ಯಗಳಿಗೆ ವಿದ್ವಾನ್ ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಶಾಸ್ತ್ರೀಯವಾಗಿ ನೃತ್ಯ ಸಂಯೋಜನೆ ಮಾಡಿಕೊಂಡು ಕವಿಗಳಿಗೆ ನಮನ ಸಲ್ಲಿಸುವ ನೃತ್ಯಾಂಜಲಿ ಕಾರ್ಯಕ್ರಮ ವಿಶೇಷವಾಗಿ ಪ್ರದರ್ಶನಗೊಂಡಿತು. ಬಾರಿಸು ಕನ್ನಡ ಡಿಂಡಿಮ ವ, ಜೈ ಭಾರತ ಜನನಿಯ ತನುಜಾತೆ ನೃತ್ಯ ವಿಶೇಷವಾಗಿ ಮೂಡಿ ಬಂತು. ಕಲಾವಿದರಾದ ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್, ವಿದುಷಿ ಸೌಜನ್ಯ, ಕು.ಅಪೂರ್ವ ಗೌರಿ ದೇವಸ್ಯ, ಪ್ರಣಮ್ಯ, ವಿಭಾಶ್ರೀ, ಅಕ್ಷತಾ ಕೆ, ಸ್ವಾತಿ ಎನ್. ಪುಟಾಣಿ ಕಲಾವಿದರಾದ ವಿಷ್ಣುಪ್ರಿಯ, ಭಾನವಿಕೃಷ್ಣ, ಲಾಸ್ಯ, ನಿಶಿ, ಅವನಿ ವೈ, ವೈಭವಿಲಕ್ಷ್ಮೀ ನೃತ್ಯದಲ್ಲಿ ಭಾಗವಹಿಸಿದರು. ಸಂಸ್ಥೆಯ ಸಂಚಾಲಕಿ ಶಶಿಪ್ರಭಾ ಉಪಸ್ಥಿತರಿದ್ದರು.