ಆಲಂಕಾರು:ಕಡಬ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ .ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ 8ನೇ ತರಗತಿಯ ಮಾನಸ 200 ಮೀ, 400ಮೀ, 800ಮೀ ಓಟದಲ್ಲಿ ದಾಖಲೆಯ ಸರ್ವ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಗೆ ಪಾತ್ರರಾಗಿದ್ದಾರೆ. ರಾಕೇಶ್ ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಮನೋಜ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಮಧುಶ್ರೀ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಅಭಿಜ್ಞಾ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಹಾಗೂ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ರನ್ನರ್ ಅಪ್ ತಂಡದಲ್ಲಿದ್ದ ಕ್ರೀಡಾಪಟುಗಳಾದ ರಕ್ಷಿತ್, ಕಾರ್ತಿಕ್, ತೇಜಸ್, ಚಿಂತನ್, ಸೃಜನ್ ಎನ್, ಶರತ್ ಬಿ, ರಿತೇಶ್ ಕೆ ಎನ್, ಅಶ್ವಿತ್ ಬಿ ಎನ್, ಶಾಹಿನಾ, ಜ್ಯೋತ್ಸ್ನಾ, ಸಂಧ್ಯಾ, ಕಾವ್ಯ, ಅನನ್ಯಾ, ಲಿಖಿತ, ರೂಪಿಕಾ, ರೂಪಿತ, ನೀಕ್ಷಾ, ಅಕ್ಷಯ್, ಮನ್ವಿತ್, ಯಜ್ಞೆಶ್, ದೇದೀಶ್, ರಕ್ಷಿತ್ ಎಸ್ ಜೆ, ಯಶ್ವಿನಿ, ದಾಮಿನಿ, ಯಜ್ಞ, ಪಲ್ಲವಿ, ಮಾನ್ವಿ, ದೀಕ್ಷಾ, ಸಾತ್ವಿಕ, ವರ್ಷಿಣಿ, ವಂದನಾ, ಆದಿತ್ಯ ಕೆ, ನಿತೇಶ್, ವಿನ್ಯಾಸ್, ಹರ್ಷಿತ್, ಉಮರ್ ಫಝಲ್, ಪವಿತ್ ಕುಮಾರ್, ಅಕ್ಷಯ್. ವಿಜೇತ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ಶ್ರೇಯಸ್ಸು ಕೆ ಇವರು ತರಬೇತಿ ನೀಡಿದ್ದರು. ತಂಡದ ಮೇಲ್ವಿಚಾರಕರಾಗಿ ನಿವ್ಯಾ ರೈ, ಮಹೇಶ್ ಲಮಾಣಿ, ಜನಾರ್ಧನ ಸಹಕರಿಸಿದರು. ವಿಜೇತ ತಂಡವನ್ನು ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.