ತಾಲೂಕು ಮಟ್ಟದ ಕ್ರೀಡಾಕೂಟ- ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು:ಅ.3 ಮತ್ತು 4 ರಂದು ಶಾಲಾ ಶಿಕ್ಷಣಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕುಡಿಪಾಡಿ ಶಾಲೆಯ ಸಹಯೋಗದೊಂದಿಗೆ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

10ನೇ ತರಗತಿಯ ಶ್ರುತಿ ಎನ್ ಕೆ ಜಾವೆಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ, 9ನೇ ತರಗತಿಯ ಚೈತನ್ಯ ಕೆ 200 ಮೀಟರ್ ಓಟದಲ್ಲಿ ತೃತೀಯ, 400ಮೀಟರ್ ಓಟದಲ್ಲಿ ತೃತೀಯ ಸ್ಥಾನ , 9ನೇ ತರಗತಿ ಆಯಿಷಾ ಹಸೀಬಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ,9ನೇ ತರಗತಿ ಆಯಿಷತ್ ಮುಬಶಿರ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, 8ನೇ ತರಗತಿಯ ಎ ನಫೀಸತ್ ರಿದಾ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ,8ನೇ ತರಗತಿ ಖುಷಿ ಕೆ ಎಂ 100ಮೀಟರ್ ಓಟದಲ್ಲಿ ತೃತೀಯ, 4*100ರಿಲೇಯಲ್ಲಿ ದ್ವಿತೀಯ ಸ್ಥಾನ 8ನೇ ತರಗತಿಯ ಭವ್ಯಶ್ರೀ 4*100 ರಿಲೇ ದ್ವಿತೀಯ ,8ನೇ ತರಗತಿ ವೈಷ್ಣವಿ ಕೆ 4*100ರಿಲೇ ದ್ವಿತೀಯ, 8ನೇ ತರಗತಿಯ ಫಾತಿಮತ್ ಸಫ 4*100 ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here