![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುಣಚ : ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.15ರಿಂದ ಪ್ರಾರಂಭಗೊಂಡು ಅ.23 ರವರೆಗೆ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ಕ್ಷೇತ್ರದಲ್ಲಿ ನಡೆಯಲಿದೆ.
ಅ.23ರಂದು ವಿಶೇಷವಾಗಿ ಬೆಳಿಗ್ಗೆ ಚಂಡಿಕಾ ಹೋಮ, ಊರ ಭಕ್ತಾದಿಗಳಿಂದ ಬಲಿವಾಡು ಕೂಟ, ಮಹಾಪೂಜೆ, ಅನ್ನಸಂತರ್ಪಣೆ ನಡೆದು ರಾತ್ರಿ ಭಜನೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಲಿರುವುದು.ಉತ್ಸವದಲ್ಲಿ ಪ್ರತಿ ದಿನ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನದ ಅನ್ನದಾನ ಹಾಗೂ ರಂಗಪೂಜೆ ಸೇವೆ ನಡೆಯುತ್ತಿದ್ದು ಅ.15ರಂದು ಬೈಲುಗುತ್ತು ಕುಟುಂಬಸ್ಥರು, ಅ.16 ರಂದು ಕೋಡಂದೂರು ಸದಾಶಿವ ಅಡ್ಯಂತಾಯ ಮತ್ತು ಕುಟುಂಬಸ್ಥರು, ಅ.17ರಂದು ದಿ.ಮೋನಪ್ಪ ರೈ, ಪತ್ನಿ ಮತ್ತು ಮಕ್ಕಳು ಪರಿಯಾಲುಗುತ್ತು, ಅ.18ರಂದು ಶಿವಣ್ಣನಾಯಕ್ ಪುಣಚ ಮತ್ತು ಕುಟುಂಬಸ್ಥರು, ಅ.19 ರಂದು ದಲ್ಕಾಜೆ ಗುತ್ತು ಕುಟುಂಬಸ್ಥರು, ಅ.20 ರಂದು ದೊಡ್ಡಮನೆ ಕುಟುಂಬಸ್ಥರು, ಅ.21 ರಂದು ಮಣಿಲ ಶಾಸ್ತ್ರಿ ಮನೆಯವರು, ಅ.22ರಂದು ವಾರಿಜ ಶಿಬರೂರಾಯ ಮತ್ತು ಮಕ್ಕಳು ಏರಣಕಟ್ಟೆ ಇವರ ಸೇವಾ ರೂಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.