ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಪಾಲಕರ ಸಭೆ

0

ನೆಲ್ಯಾಡಿ: ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ ಇಲ್ಲಿ 2ನೇ ಆವೃತ್ತಿಯ ಪಾಲಕರ ಸಭೆಯು ಅ.11ರಂದು ವಿದ್ಯಾಸಂಸ್ಥೆಯ ಮಿಲೇನಿಯಂ ಸಭಾಂಗಣದಲ್ಲಿ ನಡೆಯಿತು.

ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಕೋಸ್‌ರವರ ಮಾರ್ಗದರ್ಶನದೊಂದಿಗೆ ಪಾಲಕರ ಸಭೆ ನಡೆಸಲಾಯಿತು. ಮುಖ್ಯಗುರು ಹರಿಪ್ರಸಾದ್ ಕೆ.ಅವರು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪೋಷಕರು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಸಲಹೆ ನೀಡಿದರು. ಸಹಶಿಕ್ಷಕಿ ಜೆಸಿಂತಾ ಡಿ’ಸೋಜರವರು ವಿದ್ಯಾರ್ಥಿಗಳ ಕಲಿಕಾ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು. ರಕ್ಷಿತಾ ಸ್ವಾಗತಿಸಿ, ಅನುಷಾ ಎಂ.ಕೆ ವಂದಿಸಿದರು. ಕರುಣಾಕರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here