ಪುತ್ತೂರು:ನನ್ನ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನ ಕಾರ್ಯಕರ್ತರ ಅಭಿಪ್ರಾಯದಂತೆ ತೆಗೆದುಕೊಳ್ಳುತ್ತೇನೆ.ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಬಂದಂತೆ ಯಾವುದೇ ರೀತಿಯ ನಿರ್ಧಾರವೂ ನಡೆದಿಲ್ಲ ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತಿಲ ಪರಿವಾರ ವಾಟ್ಸಾಪ್ ಗ್ರೂಪ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕರ್ತರ ಒತ್ತಾಯದಂತೆ 2023ರ ಚುನಾವಣೆಗೆ ನಾನು ಸ್ಪರ್ಧಿಸಿದೆ.ನನ್ನ ಮುಂದಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನ ಶಕ್ತಿ ಹಾಗು ಹಿತೈಷಿಗಳಾದ ಕಾರ್ಯರ್ತರ ಜೊತೆ ಮಾತುಕತೆ ನಡೆಸಿಯೇ ನಿಮ್ಮ ಇಚ್ಚೆಯಂತೆ ಮುಂದಿನ ಹೆಜ್ಜೆ ಇಡುತ್ತೇನೆ.ಯಾವುದೇ ಗೊಂದಲಗಳಿಗೂ ಕಿವಿಗೊಡಬೇಡಿ ಎಂದು ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಗಮನಕ್ಕೆ ತಾರದೆ ನಿರ್ಧಾರ ಕೈಗೊಳ್ಳುವುದಿಲ್ಲ: ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾದ ಹೇಳಿಕೆ ಭಾರತೀಯ ಜನತಾ ಪಕ್ಷದ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ನವೀನ್ ಕುಮಾರ್ ರೈ ಪನಡ್ಕ ಕೈಕಾರ ಅವರ ಹೆಸರಿನಲ್ಲಿ ಮೋದಿ ಪರಿವಾರ ವಾಟ್ಸಪ್ ಗ್ರೂಪ್‌ನಲ್ಲಿ ಸ್ಪಷನೆ ನೀಡಲಾಗಿದೆ.ಇಲ್ಲಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ, ಮತದಾರರ ಭಾವನೆಗಳನ್ನು ಅವಲೋಕಿಸಿ ಸೇರ್ಪಡೆಯ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವಾಗುತ್ತದೆ.ಪಕ್ಷ ನಿಷ್ಠ ಪ್ರಾಮಾಣಿಕ ಕಾರ್ಯಕರ್ತರ ಗಮನಕ್ಕೆ ತರದೆ ಪಕ್ಷ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ.ಇದು ನಮ್ಮ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ. ಪತ್ರಿಕಾ ವರದಿಗೆ ಸಂಬಂಧಿಸಿ ಭಾರತೀಯ ಜನತಾ ಪಕ್ಷದ ಜವಾಬ್ದಾರಿಯುತ ನಾಯಕರುಗಳಲ್ಲಿ ಮಾತಾಡಿ ಸಾರ್ವಜನಿಕವಾಗಿ ತಿಳಿಸುತ್ತಿದ್ದೇನೆ ಎಂದು ನವೀನ್ ಕುಮಾರ್ ರೈ ಪನಡ್ಕ ಕೈಕಾರ ಅವರು ಗ್ರೂಪ್‌ನಲ್ಲಿ ಹಾಕಿಕೊಂಡಿದ್ದಾರೆ.