ಪುತ್ತೂರು ವರ್ಣಕುಟೀರದಲ್ಲಿ ಅ.16 ರಿಂದ 6 ದಿನಗಳ ಕ್ಯಾಲಿಗ್ರಾಫಿ ಶಿಬಿರ

0

ಪುತ್ತೂರು: ಮಕ್ಕಳ ಚಟುವಟಿಕೆಗಳಿಗೆ ಪೂರಕವಾಗಿರುವ ಪುತ್ತೂರು ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್ ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಅಂದವಾದ ಅಕ್ಷರಕ್ಕಾಗಿ ಕ್ಯಾಲಿಗ್ರಾಫಿ ಕಲಿಯುವ 6 ದಿನಗಳ ಶಿಬಿರ ಅ.16ರಿಂದ ಆರಂಭಗೊಳ್ಳಲಿದೆ.

ಕ್ಯಾಲಿಗ್ರಾಫಿ ಎಂದರೆ ಗ್ರೀಕ್ ಭಾಷೆಯಲ್ಲಿ “ಸುಂದರ ಬರವಣಿಗೆ” ಎಂದರ್ಥ. ಇದು ಸಾವಿರಾರು ವರ್ಷಗಳಿಂದ ಲೆಕ್ಕವಿಲ್ಲದಷ್ಟು ಸಂಸ್ಕೃತಿಗಳನ್ನು ವ್ಯಾಪಿಸಿದೆ. ಅಲಂಕಾರಿಕ ಕೈಬರಹದ ಕಲೆಯನ್ನು ನೀವು ಅಭ್ಯಾಸ ಮಾಡಲು ಬಯಸಿದರೆ, ನೀವು ಕೆಲವು ಸರಳ ಹಂತಗಳನ್ನು ಬಳಸಬೇಕು. ಈ ನಿಟ್ಟಿನಲ್ಲಿ ಪ್ರವೀಣ್ ವರ್ಣಕುಟೀರ ಅವರು ಭುವಿ ಕೋಚಿಂಗ್ ಕ್ಲಾಸ್ ಮೂಲಕ ಶಿಬಿರವನ್ನು ಆರಂಭಿಸಿದ್ದಾರೆ. ಶಿಬಿರವು ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ ಗಂಟೆ 12.30ರ ತನಕ ನಡೆಯಲಿದೆ. ಆಸಕ್ತರು ನೋಂದಾವಣೆಗಾಗಿ ಮೊ: 9741502869 ಗೆ ಕರೆ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here