ವಿಠಲ ಸುಪ್ರಜಿತ್ ಖಾಸಗಿ ಐಟಿಐ ಘಟಿಕೋತ್ಸವ -2023

0

ವಿಟ್ಲ: ಇಲ್ಲಿನ ವಿಠಲ ಸುಪ್ರಜಿತ್ ಖಾಸಗಿ ಐಟಿಐ ಯಲ್ಲಿ 2021-23ನೇ ಸಾಲಿನ ಐಟಿಐ ತರಬೇತುದಾರರ ಘಟಿಕೋತ್ಸವ ಕಾರ್ಯಕ್ರಮವು ವಿಠಲ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಸಂಚಾಲಕರು ಅಲ್ಫಾನ್ಸ್ ಸಿಲ್ವೆಸ್ಟರ್ ಮಾಸ್ಕರೇನ್ಹಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಟ್ಲ ಸರಕಾರಿ ಐಟಿಐ ನ ಪ್ರಾಂಶುಪಾಲರು ಹರೀಶ್ ಕೋಟ್ಯಾನ್, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಗುರುಗಳಾದ ಸತೀಶ್ ಭಟ್ ಬಿಳಿನೆಲೆ, ಸಂಸ್ಥೆಯ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರಮೇಶ್ ರೈ ಸ್ವಾಗತಿಸಿ, ಜೆಟಿಓ ಹರ್ಷಿತಾ ವಂದಿಸಿದರು. ಜೆಟಿಓ ಸಂತೋಷ್ ಅತಿಥಿಗಳನ್ನು ಪರಿಚಯಿಸಿದರು, ಜೆಟಿಓ ನಳಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here