ನೆಲ್ಯಾಡಿ: ಅಕ್ರಮವಾಗಿ ಲಾರಿಯೊಂದರಲ್ಲಿ ಅಕೇಷಿಯಾ ಮತ್ತು ಮಾಂಜಿಯಂ ಮಿಶ್ರಿತ ಬಿಲ್ಲೆಟ್ಸ್ ನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಎಸ್. ತಡಗಿ ನೇತೃತ್ವದ ತಂಡ ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕದಲ್ಲಿ ಮರಮಟ್ಟುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ಲಾರಿಯನ್ನು ಅ.13ರಂದು ವಶಕ್ಕೆ ಪಡೆದಿದ್ದಾರೆ.
ಕೊಕ್ಕಡ ಗ್ರಾಮದ ನಿವಾಸಿ ಸಾಹುಲ್ ಹಮೀದ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ರೆಖ್ಯಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂತೋಷ್ ಎಸ್. ತಡ್ಲಗಿ, ರೆಖ್ಯ ಗಸ್ತಿನ ಗಸ್ತು ಅರಣ್ಯ ಪಾಲಕ ನಿಂಗಪ್ಪ ಅವಾರಿ, ಶಿರಾಡಿ ಗಸ್ತಿನ ಗಸ್ತು ಅರಣ್ಯ ಪಾಲಕ ಸುನೀಲ್ ನಾಯ್ಕ ಭಾಗವಹಿಸಿದ್ದರು.