ಅ.15 ರಿಂದ ಅ. 24 ರವರೆಗೆ  ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯದಲ್ಲಿ ನವರಾತ್ರಿ ಸಂಭ್ರಮ

0

ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿ ಅ.15 ರಿಂದ ಮೊದಲ್ಗೊಂಡು 24 ರವರೆಗೆ ನವರಾತ್ರಿ ಉತ್ಸವವು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಅ.15 ರಂದು ಬೆಳಿಗ್ಗೆ ಗಂಟೆ 8 ರಿಂದ ಮಹಾಗಣಪತಿ ಹವನ ನಂತರ ಶ್ರೀ ದೇವರಿಗೆ ಪಂಚವಿಂಶತಿ ಕಲಶ. ನಂತರ ಖ್ಯಾತ ಪಾಕತಜ್ಞ ಪ್ರಸಾದ್ ಭಟ್ ಘಾಟೆ ಇವರು ದೀಪ ಬೆಳಗಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿರುವರು. ನಂತರ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7 ರಿಂದ ಮಹಾಪೂಜೆ, ಶ್ರೀ ದೇವರಿಗೆ ಸಾಮೂಹಿಕ ವಿಶೇಷ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಭಜನೆ ಮತ್ತು ರಾತ್ರಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.

ಅ.20ರಂದು ಬೆಳಿಗ್ಗೆ ಗಂಟೆ 9 ರಿಂದ ಸಾಮೂಹಿಕ ಚಂಡಿಕಾ ಹೋಮ ಪ್ರಾರಂಭ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.23ರಂದು ಬೆಳಿಗ್ಗೆ ಗಂಟೆ 9 ರಿಂದ ವಿಶೇಷ ಆಯುಧ ಪೂಜೆ ಪ್ರಾರಂಭ. ಅ.24ರಂದು ಬೆಳಿಗ್ಗೆ ಕದಿರು ತುಂಬಿಸುವುದು, ಅಕ್ಷರಾಭ್ಯಾಸ, ಭಜನೆ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವ ಮೂಲಕ ಸಂಭ್ರಮದ ನವರಾತ್ರಿ ಉತ್ಸವ ಸಂಪನ್ನ ಗೊಳ್ಳಲಿದೆ. ಅ.16, 20, 21, 22 ರಂದು ಸಂಜೆ ಖ್ಯಾತ ಕುಣಿತ ಭಜನಾ ತಂಡಗಳಿಂದ ಆಕರ್ಷಕ ಕುಣಿತ ಭಜನೆ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here