ಮೊಟ್ಟೆತ್ತಡ್ಕ ಮಿಶನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸುತ್ತಿರುವ ಸಾರ್ವಜನಿಕ ನವರಾತ್ರಿ ಉತ್ಸವ ಆರಂಭವಾಗಿದ್ದು, ಅ.15 ರಂದು ಚಾಲನೆ ನೀಡಲಾಯಿತು.


ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್ ರೈ ಮಿಶನ್‌ಮೂಲೆರವರು ಧ್ವಜಾರೋಹಣವನ್ನು ನೆರವೇರಿಸಿ ಉತ್ಸವಕ್ಕೆ ಚಾಲನೆಯಿತ್ತರು. ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಉದಯ ನಾರಾಯಣ ಕಲ್ಲೂರಾಯ ಸಂಪ್ಯರವರ ನೇತೃತ್ವದಲ್ಲಿ ಸಹಾಯಕ ಅರ್ಚಕ ರಮೇಶ್ ಅಯ್ಯರ್ ಮುಕ್ರಂಪಾಡಿರವರ ಸಹಕಾರದಲ್ಲಿ ಮಹಾಗಣಪತಿ ಹೋಮ ನಡೆಯಿತು. ರಾತ್ರಿ ಯಶವಂತ ನಾಯಕ್ ಪಾದಲಾಡಿ ಪ್ರಾಯೋಜಕತ್ವದಲ್ಲಿ ಅಭಿನಯ ಕಲಾವಿದರು ಪುತ್ತೂರು ಅಭಿನಯದ, ಅಶ್ವಥ್ ಎನ್.ಪುತ್ತೂರು ಸಾರಥ್ಯದ, ವಿಖ್ಯಾತ್ ಅಮ್ಮುಂಜ ಸಂಯೋಜನೆಯ, ಯತೀಶ್ ಸಂಪ್ಯ ಸಂಗೀತದ, ಧನ್‌ರಾಜ್ ಕುದ್ರಡ್ಕ ರಚನೆಯ, ಕೇಶವ ಮಚ್ಚಿಮಲೆ ನಿರ್ದೇಶನದ ತುಳು ನಿಗೂಢಮಯ ನಾಟಕ ಮಣ್ಣ್..! ಕಾರ್ನಿಕೆದ..? ನಡೆಯಲಿದೆ.


ಶ್ರೀ ಕ್ಷೇತ್ರವು ವಿದ್ಯುದೀಪಲಂಕಾರದಿಂದ ಹಾಗೂ ಮುಕ್ರಂಪಾಡಿ-ಮೊಟ್ಟೆತ್ತಡ್ಕ ತಿರುವಿನಿಂದ ಮೊಟ್ಟೆತ್ತಡ್ಕ ಜಂಕ್ಷನ್‌ವರೆಗೆ ಕೇಸರಿ ತೋರಣಗಳಿಂದ, ಕೇಸರಿ ಬಾವುಟಗಳಿಂದ ಹಾಗೂ ಲೈಟ್ಸ್‌ಗಳಿಂದ ಅಲಂಕೃತಗೊಳಿಸಲಾಗಿದೆ. ದೇವಸ್ಥಾನದ ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಲೆಕ್ಕಪರಿಶೋಧಕ ಬಿ.ವಿಶ್ವನಾಥ ರೈ ಮಿಶನ್‌ಮೂಲೆ, ಉಪಾಧ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ. ಸಹಿತ ನೂರಾರು ಭಕ್ತಾಭಿಮಾನಿಗಳು ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು.


ಸೋಮವಾರ ಇಂಚರ ಮ್ಯೂಸಿಕಲ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಬಳಿಕ ಮಹಾಪೂಜೆ, ಮಂಗಳವಾರ ಪುತ್ತೂರು ಬಾಲವನ ಶ್ರೀದೇವಿ ಮಹಿಳಾ ಯಕ್ಷತಂಡದಿಂದ ಯಕ್ಷಗಾನ ‘ಕದಂಬ ಕೌಶಿಕೆ’ ಬಳಿಕ ಮಹಾಪೂಜೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here