ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವರಿಗೆ ಸ್ವರ್ಣಮಯ ತ್ರಿನೇತ್ರ, ಮಲ್ಲಿಗೆ ಹಾರ ಸಮರ್ಪಣೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭವಾಗಿದ್ದು, ಮೊದಲ ದಿನವಾದ ಭಾನುವಾರ ಬೆಳಗ್ಗೆ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸ್ವರ್ಣಮಯ ತ್ರಿನೇತ್ರ ಹಾಗೂ ಶ್ರೀ ಮಹಾಕಾಳಿ ಅಮ್ಮನವರಿಗೆ ಸ್ವರ್ಣಮಯ ಮಲ್ಲಿಗೆ ಹಾರ ಸಮರ್ಪಣೆ ಹಾಗೂ ಶ್ರೀ ಗಣಪತಿ ಹೋಮ, ಶ್ರೀ ರುದ್ರಯಾಗ ಹಾಗೂ ಚಂಡಿಕಾಹೋಮ ನಡೆಯಿತು.


ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಅವರ ಉಪಸ್ಥಿತಿಯಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸ್ವರ್ಣಮಯ ತ್ರಿನೇತ್ರ ಹಾಗೂ ಶ್ರೀ ಮಹಾಕಾಳಿ ಅಮ್ಮನವರಿಗೆ ಸ್ವರ್ಣಮಯ ಮಲ್ಲಿಗೆ ಹಾರ ಸಮರ್ಪಿಸಲಾಯಿತು.


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಜಯಂತ ಪೊರೋಳಿ, ಹರೀಶ ಉಪಾಧ್ಯಾಯ, ಸುನೀಲ್ ಎ., ಶ್ರೀಮತಿ ಹರಿಣಿ ಕೆ., ಶ್ರೀಮತಿ ಪ್ರೇಮಲತಾ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಹರೀಶ್ ನಾಯಕ್ ನಟ್ಟಿಬೈಲ್, ಕೃಷ್ಣರಾವ್ ಆರ್ತಿಲ, ಚಂದ್ರಕಾಂತ್ ನಾಯಕ್, ಯು.ರಾಮ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಸುಧಾಕರ ಶೆಟ್ಟಿ, ಪದ್ಮನಾಭ ಕುಲಾಲ್, ದಿವಾಕರ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here