ಪುತ್ತೂರು:ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವವು ಅ.15ರಂದು ಪ್ರಾರಂಭಗೊಂಡಿತು.
ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅನುಗ್ರಹದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರು ಮಾರ್ಗದರ್ಶನದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಅ.15ರಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಿತು. ನಂತರ ಚಂಡಿಕಾ ಹೋಮ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಸರ್ವಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀದುರ್ಗಾ ನಮಸ್ಕಾರಪೂಜೆ, ರಂಗಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.ಕ್ಷೇತ್ರದಲ್ಲಿ ಅ.16ರಂದು ವಿಶೇಷವಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ವನದುರ್ಗಾ ಹವನ, ಚಂಡಿಕಾ ಹೋಮ ನಡೆಯಿತು.
ಪ್ರತಿದಿನ ನವರಾತ್ರಿ ಉತ್ಸವದಲ್ಲಿ…
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಮಂಗಳಾರತಿ, ಚಂಡಿಕಾಹೋಮ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಸರ್ವಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀದುರ್ಗಾ ನಮಸ್ಕಾರಪೂಜೆ, ರಂಗಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಸಂಜೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಅ.19ರಂದು ಲಲಿತಾ ಪಂಚಮಿ, ಅ.22ರಂದು ದುರ್ಗಾಷ್ಟಮಿ, ಅ.23ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ, ಅ.24ರಂದು ರಂದು ವಿಜಯದಶಮಿ, ವಿದ್ಯಾರಂಭ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.