ಆಲಂಕಾರು ಗ್ರಾ.ಪಂನಿಂದ ಹಸಿಮೀನು ಮಾರುಕಟ್ಟೆ ಏಲಂ

0

ಆಲಂಕಾರು:ಆಲಂಕಾರು ಗ್ರಾ.ಪಂನಿಂದ ಹಸಿ ಮೀನು ಮಾರುಕಟ್ಟೆ ಏಲಂ ಪ್ರಕ್ರೀಯೆ ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಕಾರ್ಯದರ್ಶಿ ವಸಂತ ಶೆಟ್ಟಿ ಮೀನು ಮಾರುಕಟ್ಟೆ ಶರ್ತಗಳನ್ನು ಸಭೆಗೆ ತಿಳಿಸಿದರು.ಯು.ಕೆ ಇಸುಬು,ಅಬ್ದುಲ್ ಸಮಾದ್,ಮಹಮ್ಮದ್ ಅಸೀಪ್,ಕೇಶವ ಗೌಡ ಆಲಡ್ಕ,ಜಯಂತ ಪೂಜಾರಿ ನೆಕ್ಕಿಲಾಡಿ, ಜಯಕರ ಪೂಜಾರಿ ಕಲ್ಲೇರಿ, ಮಲ್ಲೇಶ್ ,ನವೀನ್,ಜೀತೆಂದ್ರ ಎಸ್,ಮನೋಹರ,ಅಬುಬಕ್ಕರ್ ಎನ್.ಎ,ನಾರಾಯಣ ಗೌಡ,ಮಹಮ್ಮದ್ ಅಶ್ರಫ್ ಸೇರಿದಂತೆ ಒಟ್ಟು 13 ಮಂದಿ ಏಲಂ ನಲ್ಲಿ ಬಿಡ್ಡುದಾರರಾಗಿ ಭಾಗವಹಿಸಿದರು. ಅಂತಿಮವಾಗಿ ಆಲಂಕಾರು ಪೇಟೆಯ ಮೀನು ಮಾರುಕಟ್ಟೆ ಸ್ಟಾಲ್ ನ್ನು ಯು.ಕೆ ಇಸುಬುರವರು 346500 ಕ್ಕೆ,ಆಲಂಕಾರು ಹಳೇ ಮೀನು ಮಾರುಕಟ್ಟೆ ಎ.ಪಿ.ಎಂ.ಸಿ ಕಟ್ಟಡ ದ ಬಳಿಯಿರುವ ಸ್ಟಾಲ್ ನ್ನು ಜಿತೇಂದ್ರ ರವರು ಏಲಂನಲ್ಲಿ ಪಡೆದುಕೊಂಡರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ, ಗ್ರಾ.ಪಂ ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತಕುಮಾರ್,ಶಾರದ, ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here