ಲಾಲಿತ್ಯ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ, ಅನೇಕ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೇಲೂರಿನ ನಾಟ್ಯ ಮಯೂರಿ ಲಾಲಿತ್ಯ ಕುಮಾರ್ ಇವರ ಹುಟ್ಟುಹಬ್ಬದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಸುದಾನ ವಸತಿ ಶಾಲೆ ಮಂಜಲ್ಪಡ್ಪು ಇಲ್ಲಿಯ ಎಡ್ವರ್ಡ್ ಹಾಲ್ ನಲ್ಲಿ ಅ.15ರಂದು ನಡೆಯಿತು.


ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶಿಬಿರ ನಡೆಸಿಕೊಟ್ಟರು. ಪುತ್ತೂರಿನ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ‘ಸಕ್ಕರೆ ಖಾಯಿಲೆ ಹಾಗೂ ರಕ್ತದ ಒತ್ತಡ ಇರುವಂತಹ ರೋಗಿಗಳು ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಕೊಳ್ಳಬೇಕು. ಬಡವರಿಗೆ ಇಂತಹ ಶಿಬಿರಗಳು ತುಂಬಾ ಪ್ರಯೋಜನಕಾರಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಎಸ್‌ಕೆಆರ್‌ಡಿಪಿ ಯೋಜನಾಧಿಕಾರಿ ಶಶಿಧರ್ ಶುಭ ಹಾರೈಸಿದರು. ಪ್ರಸಾದ್ ನೇತ್ರಾಲಯದ ನಿಶ್ಚಿತ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗ್ಗೆ ಸಲಹೆ ಸೂಚನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸುದಾನ ಶಾಲಾ ಸಂಚಾಲಕ ವಿಜಯ ಹಾರ್ವಿನ್ ಮಾತನಾಡಿ ಶಿಬಿರ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯರು, ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಹಾಗೂ ಶ್ರೀಕೃಷ್ಣ ಯುವಕ ಮಂಡಲದ ಮುಖ್ಯಸ್ಥರು ಉಪಸ್ಥಿತರಿದ್ದರು. ಬೇಲೂರಿನ ನಾಟ್ಯ ಮಯೂರಿ ಲಾಲಿತ್ಯ ಕುಮಾರ್ ಇವರ ಹುಟ್ಟುಹಬ್ಬವನ್ನು ವೇದಿಕೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಅಧಿಕ ಫಲಾನುಭವಿಗಳು ತಪಾಸಣೆ ಮಾಡಿಸಿಕೊಂಡು 19 ಜನರಿಗೆ ಕನ್ನಡಕ ಹಾಗೂ 16 ಜನರಿಗೆ ಆಪರೇಷನ್ ವ್ಯವಸ್ಥೆ ಮಾಡಲಾಯಿತು. ಆರೋಗ್ಯ ಇಲಾಖೆಯ ಕಾರ್ಯಕರ್ತರು, ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು ಸಹಕಾರ ನೀಡಿದರು. ಯೋಜನೆಯ ಮೇಲ್ವಿಚಾರಕಿ ಶ್ರುತಿ ಸ್ವಾಗತಿಸಿದರು. ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮನೋಹರ್, ಸತ್ಯನಾರಾಯಣ್ ಭಟ್, ಗಿರೀಶ್. ಎಂ. ಎಸ್ ಹಾಗೂ ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟಿನ ನವೀನ್ ಸಿಟಿಗುಡ್ಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರತಿಭೆ ವೈಷ್ಣವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here