ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಸುವರ್ಣ ಸಂಭ್ರಮ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಮಹನೀಯರನ್ನು ನೆನಪಿಸುವ ಸಲುವಾಗಿ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಪುತ್ತೂರು ಮನಿಷಾ ಸಭಾಂಗಣದಲ್ಲಿ ನ.5 ರಂದು ಪೂರ್ವಾಹ್ನ 10ಕ್ಕೆ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಕವನಗಳನ್ನು ಮಾತ್ರ ವಾಚನ ಅಥವಾ ಗಾಯನ ಮಾಡಲು ಅವಕಾಶ, ಗಾಯನದಲ್ಲಿ ಕರೋಕೆ ಉಪಯೋಗಿಸಲು ಅವಕಾಶವಿಲ್ಲ. ಆಸಕ್ತ ಗಾಯಕರು/ ವಾಚಕರು ಹೆಸರು ನೋಂದಾಯಿಸಲು ಕಾರ್ಯಕ್ರಮದ ಸಂಯೋಜಕಿ ಸುಪ್ರಿತಾ ಚರಣ್‌ರವರ ದೂರವಾಣಿ 8971271027ಸಂಪರ್ಕಿಸಬಹುದು.
ಉತ್ತಮ ಗಾಯನ /ವಾಚನ ಮಾಡಿದವರಿಗೆ ಪುಸ್ತಕ ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಪ್ರತಿಯೊಬ್ಬ ಕವಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.