ರಿಪಬ್ಲಿಕ್ ಟಿವಿಯ ನ್ಯೂಸ್ ಕೋ ಆರ್ಡಿನೇಟರ್ ಆಗಿ ಪುತ್ತೂರಿನ ಕೆ.ಎಚ್ ದೇವಿಪ್ರಸಾದ್ ರೈ ನೇಮಕ

0

ಪುತ್ತೂರು: ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಪುತ್ತೂರಿನ ಕೆ.ಎಚ್ ದೇವಿಪ್ರಸಾದ್ ರೈಯವರು ಅರ್ನಾಬ್ ಗೋ ಸ್ವಾಮಿ ಒಡೆತನದ ರಿಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್‌ನ ನ್ಯೂಸ್ ಕೋಆರ್ಡಿನೇಟರ್ ಆಗಿ ನೇಮಕಗೊಂಡಿದ್ದು ಈ ಮೂಲಕ ಮಾಧ್ಯಮ ಕ್ಷೇತ್ರದ ಅಗ್ರಮಾನ್ಯ ಸಂಸ್ಥೆಗೆ ಪಾದಾರ್ಪಣೆ ಮಾಡಿದ್ದಾರೆ.


ಪುತ್ತೂರಿನ ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಅಲ್ಲಿಂದ ಫಿಲೋಮಿನಾ ಪ್ರೌಢಶಾಲೆ ಹಾಗೆಯೇ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಇವರು ಕಾಲೇಜು ದಿನಗಳಲ್ಲಿ ಕ್ರೀಡಾಪಟು ಕೂಡ ಆಗಿದ್ದರು. ವ್ಯಕ್ತಿತ್ವ ವಿಕಸನದಲ್ಲಿ ಲಿಯೋ ಕ್ಲಬ್ ನಲ್ಲಿ ಸಕ್ರಿಯರಾಗಿದ್ದ ದೇವಿ ಪ್ರಸಾದ್, ಜಿಲ್ಲಾ ಖಜಾಂಚಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಂಡ ಇವರು, ಎನ್‌ ಎಸ್‌ ಯು ಐ ನಾಯಕರಾಗಿ ಹಾಗೂ ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕನ್ನಡದ ಮೊದಲ ನ್ಯೂಸ್ ಚಾನಲ್ ಆಗಿದ್ದ ಉದಯ ಟಿವಿಯಲ್ಲಿ ವಾರ್ತಾವಾಚಕರಾಗಿ ಕಾರ್ಯ ಆರಂಭಿಸಿದ ಇವರು ನಂತರ ಉಪ ಸಂಪಾದಕರಾಗಿ, ವರದಿಗಾರರಾಗಿ ಸುದೀರ್ಘ ಕೆಲಸ ಮಾಡಿದ್ದಾರೆ. ಇವರ ಅಪರಾಧ ವರದಿಗಾರಿಕೆಗೆ ಲೋಕಾಯುಕ್ತ ಸಂಸ್ಥೆ ಗೌರವ ಪ್ರಶಸ್ತಿ ನೀಡಿ ಗೌರವಿಸಿತ್ತು.


ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ವಿ ಸದಾನಂದ ಗೌಡ ಅವರ ಮಾಧ್ಯಮ ಘಟಕದಲ್ಲಿ ಕೆಲಸ ನಿರ್ವಹಿಸಿ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಕೆಲ ಕಾಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ದೇವಿಪ್ರಸಾದ್ ರೈಯವರನ್ನು ಇದೀಗ ಮತ್ತೆ ಮಾಧ್ಯಮ ಕ್ಷೇತ್ರ ಕೈ ಬೀಸಿ ಕರೆದಿದೆ. ಮಾಧ್ಯಮ ರಂಗದಲ್ಲಿ ಕ್ರಾಂತಿ ಎಬ್ಬಿಸಿದ ಪತ್ರಕರ್ತ ಅರ್ನಾಬ್ ಗೋ ಸ್ವಾಮಿ ಒಡೆತನದ ರಿಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್‌ನ ನ್ಯೂಸ್ ಕೋಆರ್ಡಿನೇಟರ್ ಆಗಿ ಎರಡನೇ ಇನ್ನಿಂಗ್ಸ್ ಆರಂಬಿಸಿದ್ದಾರೆ.


ಪತ್ನಿ ಸುಧೀಕ್ಷಾ ರೈ, ಪುತ್ರರಾದ ನಿಷ್ಕರ್ಶ್ ಹಾಗೂ ಮಿತಾಂಶ್ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಪುತ್ತೂರಿನ ಬಪ್ಪಳಿಗೆ ನಿವಾಸಿ ಹಿರಿಯ ಯಕ್ಷಗಾನ ಕಲಾವಿದ ಕೆ. ಎಚ್ ದಾಸಪ್ಪ ರೈ ಯವರ ಪುತ್ರ.

LEAVE A REPLY

Please enter your comment!
Please enter your name here