ಡಾ.ರಾಜಲಕ್ಷ್ಮಿ ಎಸ್‌.ರೈ ರಿಗೆ ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ ಹಾಗೂ ನ್ಯಾಷನಲ್ ಅವಾರ್ಡ್ ಆಫ್ ಎಕ್ಸಲೆನ್ಸ್ -2023 ಪುರಸ್ಕಾರ

0

ಪುತ್ತೂರು : ಡಾ. ರಾಜಲಕ್ಷ್ಮಿ ಎಸ್. ರೈ ಇವರು ಮಂಡಿಸಿರುವ ರಿಸರ್ಚ್ ಮಹಾಪ್ರಬಂಧ “Dividend Policy and its impact on share price of Nationalised Commercial Banks Listed in BSE” ಇದಕ್ಕೆ ಗ್ಲೋಬಲ್ ಮ್ಯಾನೇಜ್ ಮೆಂಟ್ ಕೌನ್ಸಿಲ್ ಅಹ್ಮದಾಬಾದ್ ಇದರ ವತಿಯಿಂದ ‘Adarsh Vidya Saraswati Rashtriya Puraskar”ಹಾಗೂ “National Award of Excellence-2023” ಪುರಸ್ಕಾರವನ್ನು ನೀಡಿ ಗೌರವಿಸಿದೆ.

ಇವರು ಈ ಹಿಂದೆ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಪುತ್ತೂರು ನೆಲ್ಲಿಕಟ್ಟೆ ನಿವಾಸಿ ಶಿವಶಂಕರ್ ರೈ ಇವರ ಧರ್ಮಪತ್ನಿ.ದಿ. ಐಕಳ ಎ. ಆನಂದ ಶೆಟ್ಟಿ ಮತ್ತು ಶಾಂಭವಿ ಶೆಟ್ಟಿ ಇವರ ಪುತ್ರಿ ಹಾಗೂ ದಿ. ನೆಲ್ಲಿಕಟ್ಟೆ ವೆಂಕಪ್ಪ ರೈ ಮತ್ತು ಕಲಾವತಿ ವಿ ರೈ ಇವರ ಸೊಸೆ.

LEAVE A REPLY

Please enter your comment!
Please enter your name here