ಕಡಬ: ಸೆ.30ರಂದು ನಿಧನರಾದ ಕಡಬ ಪಿಜಕ್ಕಳ ನಂದೋಳಿ ನಿವಾಸಿ, ನಾಟಿವೈದ್ಯೆ ಶ್ರೀಮತಿ ಜಾನಕಿಯವರ ಶ್ರದ್ದಾಂಜಲಿ ಸಭೆ ಅ.16ರಂದು ಕಡಬ ಗ್ರಾಮದ ಪಿಜಕ್ಕಳ ನಂದೋಳಿ ಮನೆಯಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಜನಾರ್ದನ ಗೌಡರವರು ಮಾತನಾಡಿ, ಮೃತ ಜಾನಕಿಯವರು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಮಾದರಿ ಮಹಿಳೆಯಾಗಿದ್ದರು ಎಂದು ಗುಣಗಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಕಡಬದ ಉದ್ಯಮಿ ಸುಂದರ ಗೌಡ ಮಂಡೆಕ್ಕರ, ನಿವೃತ್ತ ವನಪಾಲಕ ಎಲ್ಯಣ್ಣ ಪೂಜಾರಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಪುಟ್ಟಣ್ಣ ಗೌಡ, ನಿವೃತ್ತ ಶಿಕ್ಷಕಿ ರುಕ್ಮಿಣಿ, ಕೃಷಿಕ ಕೊರಗಪ್ಪ ಗೌಡ ಕಲ್ಲರ್ಪೆ, ಮೋನಪ್ಪ ಗೌಡ ನಾಡೋಳಿ, ವೇಣುಗೋಪಾಲ ರೈ, ನಿವೃತ್ತ ಸೈನಿಕ ಸುಂದರ ಗೌಡ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಬಾಲಕೃಷ್ಣ ಪೂಜಾರಿ, ನಿವೃತ್ತ ಶಿಕ್ಷಕ ಸುಂದರ ಗೌಡ ಪಣೆಮಜಲು, ಶಿಕ್ಷಕಿ ವೀಣಾ ಪಣೆಮಜಲು, ಆನಂದ ಪೂಜಾರಿ ಅಮೈ, ಸುಂದರ ಪೂಜಾರಿ ಸೇರಿದಂತೆ ಹಲವು ಮಂದಿ ಗಣ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮೃತರ ಪತಿ ಮಾಯಿಲಪ್ಪ ಪೂಜಾರಿ, ಪುತ್ರರಾದ ಮೇದಪ್ಪ ಪೂಜಾರಿ, ನೀಲಯ್ಯ ಪೂಜಾರಿ, ಚಂದ್ರಶೇಖರ ಪೂಜಾರಿ, ಅಶೋಕ ಪೂಜಾರಿ, ಸೊಸೆಯಂದಿರಾದ ಶಾರದಾ, ಜಯಶ್ರೀ, ಸವಿತಾ, ಲಲಿತ, ಮೊಮ್ಮಕ್ಕಳಾದ ಮನೀಷ್, ಗಣೇಶ್,ಜಾಹ್ನವಿ, ಪ್ರಥಮ್, ಪ್ರಾಪ್ತಿ, ದಕ್ಷಿತ್, ಅಶ್ವಿತ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.