ಡ್ರಾಯಿಂಗ್ ಸ್ಪರ್ಧೆ- ನವೋದಯ ಪ್ರೌಢ ಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ತೃತೀಯ

0

ಪುತ್ತೂರು: ಯು. ಆರ್. ಸ್ಯಾಟಲೈಟ್ ಸೆಂಟರ್ ಬೆಂಗಳೂರು ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇದರ ಸಹಯೋಗದೊಂದಿಗೆ World Space week – 2023 ಎಂಬ ಕಾರ್ಯಕ್ರಮವು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಅ.7ರಂದು ನಡೆಯಿತು .ಕಾರ್ಯಕ್ರಮದಲ್ಲಿ ISRO ವಿಜ್ಞಾನಿಗಳ ತಂಡ ಜಿಲ್ಲಾ ಪ್ರೌಢಶಾಲಾ ಮಕ್ಕಳಿಗೆ‌ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದ , ರಸಪ್ರಶ್ನೆ,ಡ್ರಾಯಿಂಗ್ ಮತ್ತು ಆಶು ಭಾಷಣ ಸ್ಪರ್ಧೆ ನಡೆಸಿದರು .ಅದರಲ್ಲಿ ISRO ಸಂಬಂಧಿತ ಡ್ರಾಯಿಂಗ್ ಸ್ಪರ್ಧೆಯಲ್ಲಿ ನವೋದಯ ಪ್ರೌಢ ಶಾಲೆಯ ವಿದ್ಯಾರ್ಥಿನಿ 8ನೇ ತರಗತಿಯ ಧನ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾಳೆ.ಇವಳಿಗೆ ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯ ಗುರು ಪುಷ್ಪಾವತಿ ಎಸ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here