ಪುತ್ತೂರು: ಭಾರತೀಯರಿಗೆ ಯಾವ ದೇಶದಲ್ಲೂ ನಿರ್ಬಂಧವಿಲ್ಲ. ಎಲ್ಲಾ ದೇಶದವರು ಬರಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಭಾರತೀಯ ಸಂಸ್ಕೃತಿ, ಆಚರಣೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.
ನವದುರ್ಗಾರಾಧನ ಸಮಿತಿ ವತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣು ಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುತ್ತೂರು ದಸರಾ ಮಹೋತ್ಸವ ಅ.17 ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಧರ್ಮ, ಧರ್ಮಕೇಂದ್ರಗಳಾದ ದೇವಸ್ಥಾನ, ಭಜನಾ ಮಂದಿರ, ದೈವಸ್ಥಾನಗಳ ಅನುಷ್ಠಾನಗಳ ಮೂಲಕ ಸಂಸ್ಕೃತಿಗೆ ಜಗತ್ತಿನಲ್ಲೇ ಗೌರವವಿದೆ. ಈ ನಿಟ್ಟಿನಲ್ಲಿ ಭಾರತೀಯರಿಗೆ ಯಾವ ದೇಶದಲ್ಲೂ ನಿರ್ಬಂದವಿಲ್ಲ ಅದೇ ರೀತಿ ವಿದೇಶದಲ್ಲಿ ಯುದ್ಧದ ಬೀತಿಯಿದ್ದರೂ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಭಾರತ ಯಶಸ್ವಿಯಾಗಿದೆ ಎಂದರು. ಪುತ್ತೂರು ದಸರಾ ಸಮಿತಿ ಗೌರವ ಸಲಹೆಗಾರ ಮಂಜಪ್ಪ ರೈ ಬಾರಿಕೆ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ವೀಣಾ ರಾಘವೇಂದ್ರ, ಪುತ್ತೂರು ದಸರಾ ಸಮಿತಿ ಜೊತೆಕಾರ್ಯದರ್ಶಿ ಲಿಂಗಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಎಸ್.ಕೆ ಸ್ವಾಗತಿಸಿ, ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.