ಕಾಣಿಯೂರು: ಕರ್ನಾಟಕ ಸರಕಾರ ತೋಟಗಾರಿಕೆ ಇಲಾಖೆ ಪುತ್ತೂರು,ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಯೋಜನೆಯ ಅಡಿಯಲ್ಲಿ ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪನಿಯ ಸದಸ್ಯ ರಾಮಕೃಷ್ಣ ದೋಲ್ಪಾಡಿ ರವರ ಮನೆಯಲ್ಲಿ 5HP ಸೋಲಾರ್ ಪಂಪ್ ಅಳವಡಿಸಿ,ರೂ 1,50,000 ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನವಿದ್ದು, ಪುತ್ತೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರೇಖಾ, ತಾಂತ್ರಿಕ ಸಹಾಯಕ ನಿರ್ದೇಶಕ ಶಿವಪ್ರಕಾಶ್ , ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿಕೇಶ್ ಗೌಡ, ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಸದಾನಂದ ಸೌತೆಮಾರು, ಇಕೋವ ಸಂಸ್ಥೆಯ ಸಂಯೋಜಕ ಧರ್ಮೇಂದ್ರ ಗೌಡ ಕಟ್ಟುತ್ತಾರು ಅವರು ಸ್ಥಳಕ್ಕೆ ಭೇಟಿ ನೀಡಿ ಸೋಲಾರ್ ಪಂಪ್ ನ್ನು ಪರಿಶೀಲಿಸಿದರು.