ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಎಂ.ಪಿ ಆಯ್ಕೆ
ಪುತ್ತೂರು: ಮಾಪಲ್ ಕುಟುಂಬದಿಂದ ಕಳೆದ 10 ವರ್ಷ ಹಿಂದೆ ಆರಂಭಿಸಲಾದ ಬಡ್ಡಿರಹಿತ ಶರೀಅತ್ ಬ್ಯಾಂಕ್ ಮಾಪಲ್ ಫ್ಯಾಮಿಲಿ ಫಂಡ್ ಇದರ ವಾರ್ಷಿಕ ಮಹಾಸಭೆಯು ಮಾಪಲ್ ತರವಾಡಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಾಪಲ್ ಫ್ಯಾಮಿಲಿ ಫಂಡ್‌ನ ಅಧ್ಯಕ್ಷ ಎಂ.ಪಿ ಅಬ್ದುಲ್ ರಹ್ಮಾನ್ ಸಖಾಫಿಯವರು ವಹಿಸಿದ್ದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ದುವಾಶಿರ್ವಚನ ಹಾಗೂ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾಪಾಲ್ ಫ್ಯಾಮಿಲಿ ಫಂಡ್ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಆದಂ ಹಾಜಿ, ಅಧ್ಯಕ್ಷರಾಗಿ ಜಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪ್ರ ಕಾರ್ಯದರ್ಶಿಯಾಗಿ ಲತೀಫ್ ಎಂ.ಪಿ, ಕೋಶಾಧಿಕಾರಿಯಾಗಿ ಸಿದ್ದಿಕ್ ಎಂ.ಪಿ, ಉಪಾಧ್ಯಕ್ಷರಾಗಿ ಯಾಕೂಬ್ ಎಂ.ಪಿ, ಜೊತೆ ಕಾರ್ಯದರ್ಶಿಗಳಾಗಿ ಮುನವ್ವರ್ ಎಂ.ಪಿ, ನಝೀರ್ ಕಲ್ಲಾಪು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎಂ.ಪಿ ಸಖಾಫಿ ಹಾಗೂ ಇಕ್ಬಾಲ್ ಹನೀಫಿರವರನ್ನು ನೇಮಕ ಮಾಡಲಾಯಿತು.
ನಿರ್ಣಯಗಳು:
2024 ಜ.1ರಿಂದ ಮಾಪಲ್ ಫ್ಯಾಮಿಲಿ ಫಂಡ್ ಪುನರಾರಂಭಿಸುವುದು, ಪ್ರತಿಯೊಬ್ಬ ಸದಸ್ಯರು ತಿಂಗಳಿಗೆ ತಲಾ 200 ರೂಪಾಯಿಯಂತೆ ಪಾವತಿಸುವುದು, ಬಡ್ಡಿ ರಹಿತವಾಗಿ ಲೋನ್ ನೀಡುವ ವಿಷಯದ ಕುರಿತು ಕಮಿಟಿಯು ನಿರ್ಧರಿಸುವುದೆಂದು ನಿರ್ಣಯ ಅಂಗೀಕರಿಸಲಾಯಿತು.