ಪುತ್ತೂರು: ದ.ಕ.ಜಿಲ್ಲೆಯ ವಿವಿಧ ಕಡೆ ನಡೆಯುವ ಹಬ್ಬಗಳ ಉತ್ಸವ ಹಾಗೂ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪೋಲೀಸರ ಜೊತೆ ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್ ಪೋಲೀಸರ ತಂಡ ಕಾರ್ಯನಿರ್ವಹಿಸಲಿದ್ದು, ಈ ಕುರಿತು ಜಾಗೃತಿ ಮೂಡಿಸಲು ಪುತ್ತೂರು ಪೇಟೆಯಲ್ಲಿ ಜಂಟಿ ಪಥ ಸಂಚಲನ ನಡೆಯಿತು.
ಎಳ್ಮುಡಿ ಕೆ.ವಿ ಶೆಣೈ ಪೆಟ್ರೋಲ್ ಪಂಪ್ ಬಳಿಯಿಂದ ಪುತ್ತೂರು ಪೇಟೆಯಾಗಿ ಪಥ ಸಂಚಲನ ನಡೆಯಿತು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಎಸ್.ಐ ಆಂಜನೇಯ ರೆಡ್ಡಿ, ನಗರ ಸಂಚಾರ ಪೊಲೀಸ್ ಠಾಣೆಯ ಎಸ್ ಐ ಉದಯ ರವಿ, ಎಸ್ ಐ ಕುಟ್ಟಿ, ಮಹಿಳಾ ಪೊಲೀಸ್ ಠಾಣೆ ಎಸ್ ಐ ಭವಾನಿ ಮತ್ತು ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್ ನ ಕಮಾಂಡಿಂಗ್ ಆಫೀಸರ್ ಉಪೇಂದ್ರ ಸಿಂಗ್, ಘಟಕದ ಡಿವೈಎಸ್ಪಿ ಪ್ರದೀಪ್ ಪಿ,ಮತ್ತು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದರು.