ಎಡಮಂಗಲ: ಸಿಡಿಲು ಬಡಿದು ಮನೆಗೆ ಹಾನಿ, ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಪುತ್ತೂರು: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಡೆಕ್ಕಳ ದೇವಸ್ಯ ಶೀನ ಮುಗೇರ ಅವರ ಮನೆಗೆ ಅ.17ರಂದು ಸಿಡಿಲು ಬಡಿದು ಹಾನಿಯಾಗಿದ್ದು,ಅವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿದರು. 

ಇದೇ ವೇಳೆ ಅಧಿಕಾರಿಗಳ ಜೊತೆ ಮಾತನಾಡಿ ಸಿಡಿಲಿನಿಂದ ಹಾನಿಯಾದ ಮನೆಗೆ ಸರ್ಕಾರದಿಂದ ಪರಿಹಾರವನ್ನು ಶೀಘ್ರವಾಗಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಜಾಲ್ತಾರು, ಸುಮಾ ನೂಚಿಲ, ನಾಗೇಶ್ ಮರೋಲಿ, ಉದಯ ಡೆಕ್ಕಳ, ಕಾಂತು ದೇವಸ್ಯ, ಗುಣಪಲ ದೇವಸ್ಯ, ಸುಂದರ ದೇವಸ್ಯ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here