ʼಧರ್ಮವನ್ನು ಮೇಲೆತ್ತುವ ಸಂಗತಿ ಆಗಾಗ ನಡೆಯುತ್ತಲೇ ಇದೆʼ ಸಂಪ್ಯ ಪುತ್ತೂರು ದಸರಾ ಮಹೋತ್ಸವದಲ್ಲಿ ವಿಶ್ವೇಶ್ವರ ಭಟ್ ಬಂಗಾರಡ್ಕ

0

ಪುತ್ತೂರು: ಭಾರತಕ್ಕೆ ಹಲವು ಧರ್ಮಗಳ ಆಗಮನವಾದಾಗ ನಾವು ಮಂಡಿಯೂರಿದ್ದೇವೆ. ಆದರೆ ಮತ್ತೆ ಮತ್ತೆ ಧರ್ಮವನ್ನು ಮೇಲೆತ್ತುವ ಸಂಗತಿ ಕಾಣಿಸುತ್ತದೆ. ಹಾಗಾಗಿ ಹಿಂದು ಧರ್ಮ ಭಾರತದಲ್ಲೇ ಗಟ್ಟಿಯಾಗಿ ನೆಲೆಯೂರಿದೆ ಎಂದು ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಹೇಳಿದರು.


ನವದುರ್ಗಾರಾಧನ ಸಮಿತಿ ವತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣು ಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುತ್ತೂರು ದಸರಾ ಮಹೋತ್ಸವ ಅ.18ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮಕ್ಕೆ ಹಾನಿಯಾದ ಸಂದರ್ಭದಲ್ಲಿ ನಾನು ಬೇರೆ ಬೇರೆ ರೂಪದಲ್ಲಿ ಮತ್ತೆ ಮತ್ತೆ ಬರುತ್ತೇನೆ ಮತ್ತು ಬಂದು ಧರ್ಮವನ್ನು ಕಟ್ಟುತ್ತೇನೆ ಎಂದು ಶ್ರೀಕೃಷ್ಣ ಅಂದು ಹೇಳಿದಂತೆ ಧರ್ಮದ ಚಟುವಟಿಕೆ ಜಾಗೃತಿಗೊಳಿಸುವ ಕೆಲಸ ಎಲ್ಲಾ ಕಡೆ ನಡೆಯುತ್ತದೆ. ಅದೇ ರೀತಿ ಪುತ್ತೂರಿನ ಸಂಪ್ಯ ಉದಯಗಿರಿಯಲ್ಲೂ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಹಿಂದು ಧರ್ಮ ಗಟ್ಟಿಯಾಗಿ ನೆಲೆಯೂರಿದೆ ಎಂಬುದನ್ನು ತೋರಿಸುತ್ತಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯಕುಮಾರ್ ರೈ ಉದಯಗಿರಿ ಸ್ವಾಗತಿಸಿ, ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯಾಚಾರ್ಯ ರಾಘವೇಂದ್ರ ಪ್ರಸಾದ್ ಆಲಂಕಾರು ಇವರ ನಿರ್ದೇಶನದಲ್ಲಿ ನಾಟ್ಯ ಆರಾಧನಾ ಕಲಾಶಾಲೆ ಅಲಂಕಾರು ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯ ವೈಭವ ನಡೆಯಿತು.

LEAVE A REPLY

Please enter your comment!
Please enter your name here