





ಪಿಲಿರಂಗ್ ಪುತ್ತೂರಿಗೆ ಹೆಸರು ತರಬೇಕೆಂಬ ಅಪೇಕ್ಷೆ – ಶಕುಂತಳಾ ಟಿ ಶೆಟ್ಟಿ



ಪುತ್ತೂರು: ನವರಾತ್ರಿಯ ಪ್ರಮುಖ ಅಂಗಾಗಿ ಹುಲಿ ವೇಷ ವಿಶೇಷ. ಈ ಕುರಿತು ಕಳೆದ ವರ್ಷ ಪಿಲಿರಂಗ್ ಮಾಡಿಸಿದ್ದೆವು. ಈ ಭಾರಿ ಪಿಲಿರಂಗ್ ಸಿಸನ್-2 ಮಾಡಲಿದ್ದೇವೆ. ಅ.22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಪಿಲಿರಂಗ್ ಸಿಸನ್-2 ಪ್ರದರ್ಶನ ನಡೆಯಲಿದೆ. ಪಿಲಿ ನಲಿಕೆ ಮಂಗಳೂರಿಗೆ ಹೇಗೆ ಪ್ರಸಿದ್ದಿಯೋ ಅದೇ ರೀತಿ ಪಿಲಿರಂಗ್ ಪುತ್ತೂರಿಗೆ ಹೆಸರು ತರಬೇಕೆಂದು ನಮ್ಮಲ್ಲರ ಅಪೇಕ್ಷೆ ಎಂದು ಪಿಲಿರಂಗ್ ಸಿಸನ್-2 ಇದರ ಸಾರಥ್ಯ ವಹಿಸಿದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಹೇಳಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಂದು ಬೆಳಿಗ್ಗೆ ಗಣಪತಿ ಹೋಮ, ದುರ್ಗಾಪೂಜೆ ನಡೆಯಲಿದೆ. ಬಳಿಕ ಮೈದಾನದಲ್ಲಿ ತುಳು ಧ್ವಜಾರೋಹಣವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ನೆರವೇರಿಸಲಿದ್ದಾರೆ. ಬೆಳಿಗ್ಗೆ ಗಂಟೆ 10:30ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಪಿಲಿರಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಪಿಲಿರಂಗ್ ಸಿಸನ್ -2 ಸ್ಪರ್ಧಾ ಕಾರ್ಯಕ್ರಮ ಆರಂಭಗೊಂಡು 10 ಹುಲಿ ತಂಡಗಳಿಂದ ರಾತ್ರಿ 12 ಗಂಟೆಯ ತನಕವೂ ನಡೆಯುವ ಸಾಧ್ಯತೆ ಇದೆ. ಒಂದು ತಂಡಕ್ಕೆ ಕನಿಷ್ಠ ಒಂದು ಗಂಟೆಯಾದರೂ ಬೇಕಾಗುತ್ತದೆ. ಹಾಗಾಗಿ ಸಮಯ ಹೆಚ್ಚಾಗುತ್ತದೆ. ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 15 ಮಂದಿ ಮಾತ್ರ ಇರುತ್ತಾರೆ. ಸ್ಪರ್ಧೆಯ ವೇಳೆ ಹುಲಿ ವೇಷಧಾರಿಗಳ ನ್ಯೂನ್ಯತೆಗಳನ್ನು ತೀರ್ಪುಗಾರರು ಆಗಲೇ ತಿಳಿಸುತ್ತಾರೆ. ಹುಲಿ ಪ್ರದರ್ಶನದಲ್ಲಿ ಬೇರೆ ಬೇರೆ ಬಣ್ಣದ ಹುಲಿಗಳಿಗೆ ಪ್ರೋತ್ಸಾಹ ಬಹುಮಾನವಿದೆ. ಸಾರ್ವಜನಿಕರು ಬಂದು ಈ ಸ್ಪರ್ಧಾ ಕಾರ್ಯಕ್ರಮ ವೀಕ್ಷಣೆ ಮಾಡುವಂತೆ ಅವರು ಹೇಳಿದರು.
ನಮದಾಯೇ ಮಾಲ್ಪರ ಬಲ್ಲಿ !
ಮಂಗಳೂರಿನಲ್ಲಿ ಬಿಟ್ಟು ಬೇರಲ್ಲೂ ಹುಲಿ ವೇಷ ಕುಣಿತ ಸ್ಪರ್ಧೆ ಇರಲಿಲ್ಲ. ಮಂಗಳೂರಿನಲ್ಲಿ ಮಿಥುನ್ ರೈ ಅವರು ಆಯೋಜಿಸಿದ ಪಿಲಿ ನಲಿಕೆ ನೋಡಲು ನಮ್ಮ ಯುವಕರು ಸಹಿತ ನಾನೂ ಹೋಗುತ್ತಿದ್ದೆ. ಇಲ್ಲಿ ನಮ್ಮ ಯುವಕರಾದ ಪೂರ್ಣೇಶ್, ರಂಜಿತ್, ರೋಶನ್ ನಮ ದಾಯೇ ಮಾಲ್ಪರ ಬಲ್ಲಿ ಎಂದು ಪ್ರಶ್ನೆ ಹಾಕಿದರು. ಅದರ ಎಬಿಸಿಡಿ ಯಾವುದು ನಮಗೆ ಗೊತ್ತಿರಲಿಲ್ಲ. ಆದರೆ ನಮ್ಮನ್ನು ಮುಂದಿಟ್ಟು ಮಾಡಿದ್ದರು. ಇಲ್ಲಿ ಜಾತ್ಯಾತೀತ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಒಂದು ವರ್ಷ ಮಾಡಿ ಇನ್ನೊಂದು ವರ್ಷ ನಿಲ್ಲಿಸಬಾರದೆಂದು ಪಿಲಿ ರಂಗ್ ಮಾಡಿದ್ದೇವೆ. ಈಗ ಪುತ್ತೂರಿನಲ್ಲಿ ಹುಲಿಗಳದ್ದೇ ರಾಶಿ ತುಂಬಿದೆ. ಈ ಸ್ಪರ್ಧೆ ಬ್ಯುಸಿನೆಸ್ ಆಗಬಾರದು. ಇದು ಸಾಂಸ್ಕೃತಿಕವಾಗಿ ಪುತ್ತೂರು ಬೆಳೆಯಲಿ ಎಂದು ಆಯೋಜಿಸಿದ್ದೇವೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.
ಚಿತ್ರ ನಟರು ಭಾಗಿ:
ಬಿಡುಗಡೆ ಹಂತದಲ್ಲಿರುವ ನೂತನ ಚಲನ ಚಿತ್ರವೊಂದರ ಪ್ರೋಮೊ ಬಿಡುಗಡೆ ಮಾಡುವ ಕಾರ್ಯಕ್ರಮ ಇದೆ. ಇದರ ಜೊತೆಗೆ ಅಬತಾರ, ಸರ್ಕಸ್ ಹೀಗೆ ಹಲವಾರು ಚಲನ ಚಿತ್ರದ ನಾಯಕ ನಾಯಕಿ ನಟರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರು ನಮಗೆ ಅತಿಥಿಗಳೇ ಆಗಿದ್ದರಿಂದ ಆಮಂತ್ರಣದಲ್ಲಿ ಯಾರದ್ದೇ ಹೆಸರನ್ನು ಪ್ರತ್ಯೇಕವಾಗಿ ಮುದ್ರಿಸಿಲ್ಲ. ಸಾರ್ವಜನಿಕರು ಎಲ್ಲರು ಭಾಗವಹಿಸಬೇಕು ಮತ್ತು ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ, ಮಹಾಗಣಪತಿ ಬಿಟ್ಟು ನಾವಿಲ್ಲ. ಅವರ ಅನುಮತಿ ಪಡೆದು ಕಾರ್ಯಕ್ರಮ ನಡೆಯಲಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಶಾಸಕರು ಕಾರ್ಯಕ್ರಮಕ್ಕೆ ಪ್ರದಾನವಾಗಿ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಿಲಿರಂಗ್ ಸಿಸನ್ -2 ಇದರ ಗೌರವಾಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಶಿವರಾಮ್ ಆಳ್ವ, ಕೋಶಾಧಿಕಾರಿ ರಂಜಿತ್ ಬಂಗೇರ, ಉಪಾಧ್ಯಕ್ಷ ರೋಶನ್ ರೈ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.





10 ತಂಡಗಳಿಂದ ಸ್ಪರ್ಧಾ ಪ್ರದರ್ಶನ
ನಾವು 8 ತಂಡಗಳಿಗೆ ಅವಕಾಶ ನೀಡಿದ್ದೆವು. ಬಳಿಕ 3 ತಂಡ ಹೆಚ್ಚುವರಿಯಾಗಿ ನಾವು ಬರುತ್ತೇವೆ ಎಂದು ಕೇಳಿಕೊಂಡಂತೆ 10 ತಂಡಗಳಿಗೆ ಅವಕಾಶ ನೀಡಿದ್ದೇವೆ. ಒಂದೊಂದು ತಂಡಕ್ಕೆ ತಲಾ 25 ನಿಮಿಷ ಕಾಲಾವಕಾಶ ನೀಡಿದೆ. ಆದರೂ ಒಂದು ತಂಡಕ್ಕೆ ಸುಮಾರು 1 ಗಂಟೆ ಬೇಕಾಗುತ್ತದೆ. ದಿನೇಶ್ ಕುಂಪಾಲ ಸಹಿತ ಇಬ್ಬರು ತೀರ್ಪುಗಾರುರರು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ ಶಕುಂತಳಾ ಶೆಟ್ಟಿ ಹೇಳಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 3,33,333 ಘೋಷಣೆ
ವಿಜೇತ ತಂಡಕ್ಕೆ ಕಳೆದ ವರ್ಷ ರೂ. 1ಲಕ್ಷ (ಪ್ರ), ರೂ. 50ಸಾವಿರ(ದ್ವಿ) ನೀಡಿದ್ದೆವು. ಅದು ಬಹಳ ಕಿಂಚಿತ್ ಬಹುಮಾನ ಆಗಿತ್ತು. ಈ ಭಾರಿ ಪ್ರಥಮ ಬಹುಮಾನವಾಗಿ ರೂ. 3,33,333 ನಗದು, ದ್ವಿತೀಯ ಬಹುಮಾನವಾಗಿ ರೂ. 2, 22,222 ಅನ್ನು ನೀಡಲಾಗುವುದು ಮತ್ತು 3ನೇ ಮತ್ತು 4ನೇ ಸ್ಥಾನಕ್ಕೆ ಒಂದೊಂದು ಟಿ.ವಿ.ಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಬರುವಂತಹ ಎಲ್ಲಾ ತಂಡಗಳ ಪೈಕಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರನ್ನು ಬಿಟ್ಟು ಉಳಿದ ತಂಡಗಳಿಗೆ ತಲಾ ರೂ. 40ಸಾವಿರವನ್ನು ಪ್ರೋತ್ಸಾಹಕ ಬಹುಮಾನವಾಗಿ ನೀಡಲಾಗುವುದು.
ಶಕುಂತಳಾ ಟಿ ಶೆಟ್ಟಿ
ಮಾಜಿ ಶಾಸಕರು ಪುತ್ತೂರು
ನಾಳೆ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ
ಪುತ್ತೂರ‍್ದ ಪಿಲಿರಂಗ್ ಸೀಸನ್ -2 ಇದರ ಆಮಂತ್ರಣ ಪತ್ರವನ್ನು ಪುತ್ತೂರು ಪೇಟೆಯಲ್ಲಿ ವಿತರಣೆ ಮಾಡಲಾಗುವುದು. ದರ್ಬೆಯಿಂದ ಬೊಳುವಾರು ತನಕ ಹುಲಿ ವೇಷಧಾರಿಗಳು ಸಹಿತ ಹಲವಾರು ಮಂದಿ ಆಮಂತ್ರಣ ಪತ್ರ ವಿತರಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ತಿಳಿಸಿದ್ದಾರೆ.







