ಸುರತ್ಕಲ್ ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ವಿಟ್ಲದ ವಿದ್ಯಾರ್ಥಿನಿ ನೀರಲ್ಲಿ ಮುಳುಗಿ ಮೃತ್ಯು

0

ವಿಟ್ಲ :ಶಾಲೆಗೆ ರಜೆ ಹಿನ್ನೆಲೆಯಲ್ಲಿ ಬೀಚ್‌ಗೆ ತೆರಳಿದ್ದ ವಿಟ್ಲ ಪರಿಸರದ ವಿದ್ಯಾರ್ಥಿಗಳ ಪೈಕಿ ಓರ್ವ ಬಾಲಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.

ಬಾಲಕಿ ನಿಶಾ(15 ವ.) ಮೃತಪಟ್ಟ ದುರ್ದೈವಿ. ವಿಟ್ಲ ಮೂಲದ ದಿಗಂತ (15 ವ.), ದಿವ್ಯರಾಜ್ (15 ವ.), ತೇಜಸ್ (14 ವ.), ಕೀರ್ತನ್ (16 ವ.), ಅಶ್ಮಿತಾ (15 ವ.), ನಿಶಾ (15 ವ.) ರವರು ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಲ್ಲಿ ಆಟ ಆಡಲು ತೆರಳಿದ್ದರು. ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ ಇವರನ್ನು ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ನಿಶಾರವರು ನೀರಲ್ಲಿ ಮುಳುಗಿ ಮೃತಪಟ್ಟರು.

ನಾಲ್ಕು ಜನ ಆರೋಗ್ಯವಾಗಿದ್ದು, ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ. ವಿದ್ಯಾರ್ಥಿಗಳೆಲ್ಲರೂ ವಿಟ್ಲ ಪರಿಸರದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದವರಾಗಿದ್ದು, ರಜೆಯ ಹಿನ್ನೆಲೆಯಲ್ಲಿ ಸುತ್ತಾಡಲು ತೆರಳಿದ್ದರೆನ್ನಲಾಗಿದೆ. ಮೃತ ಬಾಲಕಿ ನೇಪಾಳ ಮೂಲದವರಾಗಿದ್ದು ವಿಟ್ಲ ಪರಿಸರದಲ್ಲಿ ವಾಸವಾಗಿದ್ದರು ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here