ಕಳೆಂಜ ದೇವಸ್ಥಾನದ ಆಭರಣ ನಾಪತ್ತೆ ಪತ್ತೆ ಪ್ರಕರಣ-ಮಾಜಿ ಅಧ್ಯಕ್ಷಗೆ ಜಾಮೀನು

0

ಉಪ್ಪಿನಂಗಡಿ: ಪೆರ್ನೆಯ ಕಳೆಂಜ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರ ಆಭರಣ ನಾಪತ್ತೆಯಾಗಿ ಬಳಿಕ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ಮಾಜಿ ಅಧ್ಯಕ್ಷನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದೇವಳದಿಂದ ಆಭರಣ ನಾಪತ್ತೆ ಕುರಿತು ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್.ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ, ದೇವಸ್ಥಾನದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಅವರು, ನಾಪತ್ತೆಯಾಗಿದ್ದ ದೇವರ ಚಿನ್ನಾಭರಣದೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು.ಅವರು ಆಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಅಡಮಾನವಿರಿಸಿ ಹಣ ಪಡೆದುಕೊಂಡಿದ್ದರು.ಅಲ್ಲಿಂದ ಚಿನ್ನಾಭರಣವನ್ನು ಬಿಡಿಸಿಕೊಂಡು ಬಂದು ನೇರವಾಗಿ ಠಾಣೆಗೆ ಹಾಜರಾಗಿದ್ದರೆನ್ನುವ ವಿಚಾರವನ್ನು ತನಿಖೆಯಲ್ಲಿ ತಿಳಿದುಕೊಂಡ ಪೊಲೀಸರು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ರೋಹಿತಾಕ್ಷ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ

LEAVE A REPLY

Please enter your comment!
Please enter your name here