ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕಿನ ವಿಶೇಷ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕಿನ ವಿಶೇಷ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು ವಹಿಸಿದ್ದರು.
ತಾಲೂಕು ಜನಜಾಗೃತಿ ವೇದಿಕೆಯ ಕಾರ್ಯ ಕ್ರಮಗಳ‌ ಬಗ್ಗೆ ಚರ್ಚಿಸಲಾಯಿತು. ನವಜೀವನ ಸಮಿತಿಯ ಬಲವರ್ಧನೆಗೆ ಸಂಬಂಧಪಟ್ಟ ಪ್ರೇರಕರ ಸಹಕಾರ ಪಡೆದುಕೊಳ್ಳುವ ಕುರಿತು ಮಾಹಿತಿಯನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ರವರು ನೀಡಿದರು. ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮದ ಅನುಷ್ಠಾನ ಬಗ್ಗೆ ಚರ್ಚಿಸಲಾಯಿತು.
ತಾಲೂಕು ಭಜನಾ ಪರಿಷತ್ತಿನ ಮೂಲಕ ತಟಸ್ಥಗೊಂಡ ಭಜನಾ ಮಂಡಳಿಗಳ ಪುನಶ್ಚೇತನ ಮಾಡುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚೆ ಮಾಡಲಾಯಿತು. ಶೌರ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಸಾಮಾಜಿಕ ಸೇವೆ ಮತ್ತು ತುರ್ತು ಸೇವೆಗಳಿಗೆ ತಾಲೂಕು ಶೌರ್ಯ ತಂಡಗಳನ್ನು ಬಳಸಿ ಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಲಾಯಿತು. ಅ.29ರಂದು ನಡೆಯುವ ಪಾದಯಾತ್ರೆ ಗಳಲ್ಲಿ ಭಾಗವಹಿಸುವ ಬಗ್ಗೆ ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ರವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಡಬ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೆ, ಕಡಬ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಸುಂದರ ಗೌಡ ಒಗ್ಗು ಮತ್ತು ಪುತ್ತೂರು -ಕಡಬ ತಾಲೂಕು ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಹಾರ್ಪಳ ಉಪಸ್ಥಿತರಿದ್ದರು.

ಸಭೆಯಲ್ಲಿ ವಲಯ ಒಕ್ಕೂಟದ ಅಧ್ಯಕ್ಷರುಗಳು, ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರುಗಳು, ಭಜನಾ ಪರಿಷತ್ ನ ವಲಯದ ಪದಾಧಿಕಾರಿಗಳು, ತಾಲೂಕಿನ ಪ್ರಮುಖ ಗಣ್ಯರು ಹಾಗೂ ವಲಯದ ಮೇಲ್ವಿಚಾರಕರು ಮತ್ತು ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಪ್ರಸ್ತಾಪಿಸಿ, ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿದರು. ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here