ಅ 22-23: ಪುಣ್ಚತ್ತಾರು ಬೀರ್ನೇಲು ಕ್ಷೇತ್ರಕ್ಕೆ ಶ್ರೀ ದೇವಿಯ ವಿಗ್ರಹ ಆಗಮನ, ಶ್ರೀ ದೇವಿಯ ಪ್ರತಿಷ್ಠಾ ಸಂಕಲ್ಪ ಕಾರ್ಯಕ್ರಮ

0

ಕಾಣಿಯೂರು: ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಶ್ರೀ ದೇವಿಯ ವಿಗ್ರಹದ ಆಗಮನ ಹಾಗೂ ಶ್ರೀ ದೇವಿಯ ಮೂಲ ಮೂರ್ತಿಯ ಪ್ರತಿಷ್ಠಾ ಸಂಕಲ್ಪ ಕಾರ್ಯಕ್ರಮವು ಅ 22 ಮತ್ತು ಅ 23ರಂದು ನಡೆಯಲಿದೆ.


ಅ 22ರಂದು ಬೆಳಿಗ್ಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರು ಹಾಗೂ ಅರ್ಚಕರ ಮುಖೇನ ಶ್ರೀದೇವಿಯ ವಿಗ್ರಹವನ್ನು ಬೀರ್ನೆಲು ಶ್ರೀ ಕ್ಷೇತ್ರದ ಅರ್ಚಕರು ಮತ್ತು ಮೊಕ್ತೇಸರರು ಹಾಗೂ ಜೀರ್ಣೋದ್ಧಾರ ಸಮಿತಿಯವರು ಸ್ವೀಕರಿಸಿ ಬಳಿಕ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನಕ್ಕೆ ಆಗಮನ, ಬಳಿಕ ನಿಂತಿಕಲ್ಲಿನಿಂದ ಭಜನೆ, ಶಂಖ, ಜಾಗಟೆ ಚೆಂಡೆಯೊಂದಿಗೆ ವಿವಿಧ ಧಾರ್ಮಿಕ ಸಂಘ ಸಂಸ್ಥೆಗಳ ಸ್ವಾಗತದೊಂದಿಗೆ ವಾಹನ ಜಾಥಾದೊಂದಿಗೆ ಪುಣ್ಚತ್ತಾರಿಗೆ ಹೊರಡಿ, ಬಳಿಕ ಪುಣ್ಚತ್ತಾರು ಶ್ರೀ ಹರಿಭಜನಾ ಮಂಡಳಿಯ ವಠಾರಕ್ಕೆ ತಲುಪಿ ಅಲ್ಲಿಂದ ಮಕ್ಕಳ ಕುಣಿತ ಭಜನೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳುವುದು. ಮಧ್ಯಾಹ್ನ ಶ್ರೀ ದೇವಿಗೆ ನವರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನ, ಪುಣ್ಚತ್ತಾರು ನಾವೂರು ಕಾರ್ತಿಕೇಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ವೈಧಿಕ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಅ 23ರಂದು ಬೆಳಿಗ್ಗೆ ವೈಧಿಕ ಕಾರ್ಯಕ್ರಮ ಮತ್ತು ಶ್ರೀ ದೇವಿಯ ಪ್ರತಿಷ್ಠಾ ಸಂಕಲ್ಪ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಮತ್ತು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ದೇವಿಗೆ ನವರಾತ್ರಿ ಪೂಜೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here