ಬೆಳ್ಳಾರೆ: ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರದಿಂದ ಕಳ್ಳತನವಾದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.19ರಂದು ಸಂಜೆಯಿಂದ ಮರುದಿನ ಅ.20ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ, ಅಂಗನವಾಡಿ ಕೇಂದ್ರದ ಒಳಗೆ ದಾಸ್ತಾನಿದ್ದ ಒಟ್ಟು ರೂ 9,690 ಮೌಲ್ಯದ ಆಹಾರ ಸಾಮಗ್ರಿಗಳನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಎಂ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.