ಶಾಂತಾ ಪುತ್ತೂರು ಅವರಿಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ”ದ ಗೌರವ

0

ಪುತ್ತೂರು: ಕಬಕದ ಸರಕಾರಿ ಪ್ರೌಢಶಾಲೆ ಶಿಕ್ಷಕಿ, ಬೊಳುವಾರು ನಿವಾಸಿ, ಶಾಂತ ಪುತ್ತೂರು ಅವರಿಗೆ ಕಾಸರಗೋಡು ದಸರಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಇದರ ಸಹಯೋಗದಲ್ಲಿ ಪಾಂಗೋಡು ಶ್ರೀ ಕ್ಷೇತ್ರದ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಕಾಸರಗೋಡು ದಸರಾ ಸಾಹಿತ್ಯ ಸಂಭ್ರಮ 2023 ಕಾರ್ಯಕ್ರಮದಲ್ಲಿ ಕಾಸರಗೋಡು ದಸರಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ದ.ಕ.ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ರಾಧಾಕೃಷ್ಣ.ಕೆ. ಉಳಿಯತಡ್ಕ, ಕನ್ನಡ ಭವನದ ಅಧ್ಯಕ್ಷ ವಾಮನ್ ರಾವ್ ಬೇಕಲ್, ಸಾಹಿತಿ ಶಿಕ್ಷಕ ಜಯಾನಂದ ಪೆರಾಜೆ, ವ್ಯಂಗ್ಯ ಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ಕನ್ನಡ ಭವನದ ಸಂಚಾಲಕಿ ಸಂದ್ಯಾರಾಣಿ, ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಾ ಕೆ.ಎನ್, ಸಾಹಿತಿ ಟಿ.ತ್ಯಾಗರಾಜ್ ಮೈಸೂರು, ಪತ್ರಕರ್ತ ವಿರಾಜ್ ಅಡೂರು, ಪತ್ರಕರ್ತ ಪ್ರದೀಪ್ ಬೇಕಲ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಯಕ್ಷಗಾನ ಕಲಾವಿದ ವೀಜಿ ಕಾಸರಗೋಡು, ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ, ಕವಯಿತ್ರಿ ರೇಖಾಸುದೇಶ್ ರಾವ್, ಪತ್ರಕರ್ತ ರವಿನಾಯ್ಕಾಪು, ಜನಾರ್ದನ ಹಂದೆ, ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೇರಳ ಕರ್ನಾಟಕದ 35 ಯುವಪ್ರತಿಭೆಗಳಿಗೆ ಭರವಸೆಯ ಬೆಳಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಸರಗೋಡಿನ ಕೊರಕೋಡ್ ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ಮಹಿಳಾ ಸಂಘದಿಂದ ಭಜನೆ ನಡೆಯಿತು.

LEAVE A REPLY

Please enter your comment!
Please enter your name here