ನೆಲ್ಯಾಡಿ: ವಿವಿಧ ಬಗೆಯ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಬಡತನ ನಿರ್ಮೂಲನೇ ಮತ್ತು ಸಾಂತ್ವನ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಸೇವಾ ಕಾರ್ಯದಲ್ಲಿ ಅಪೂರ್ವವಾದ ಕೊಡುಗೆಗಳನ್ನು ಸಮಾಜಕ್ಕೆ ನೀಡುತ್ತಿರುವ ವಿನ್ಸೆಂಟ್ ಡಿ.ಪೌಲ್ ಸೊಸೈಟಿಯ ಕುಟ್ರಪ್ಪಾಡಿ, ಉದನೆ ವಲಯಗಳ ಏರಿಯಾ ಕೌನ್ಸಿಲ್‌ನ ಚಿಂತನ-ಮಂಥನ ಕಾರ್ಯಕ್ರಮ ಅ.22ರಂದು ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನಲ್ಲಿ ನಡೆಯಿತು.
ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು, ಕೆಎಸ್‌ಎಂಸಿಎ ನಿರ್ದೇಶಕರೂ ಆದ ರೆ.ಫಾ.ಶಾಜಿ ಮ್ಯಾಥ್ಯು ಅವರು ವಿನ್ಸೆಂಟ್ ಡಿ.ಪೌಲ್ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯಗಳು ಜನರಿಗೆ ನೇರವಾಗಿ ತಲುಪುತ್ತಿರುವ ಕಾರ್ಯಕ್ರಮವಾಗಿದೆ. ವೇದಗ್ರಂಥಗಳ ಪಾಲನೆ ಮತ್ತು ಅನುಷ್ಠಾನ ಮುಖ್ಯ ಎಂದು ಹೇಳಿದರು. ವಿವಿಧ ಸಮಿತಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ವಿವಿಧ ಯೋಜನೆಗಳ ವಿಸ್ತ್ರತ ವರದಿ ಮಂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏರಿಯಾ ಕೌನ್ಸಿಲ್ ಅಧ್ಯಕ್ಷ ಮ್ಯಾಥ್ಯು ವಹಿಸಿದ್ದರು. ಕೇಂದ್ರ ಸಮಿತಿಯ ಬಿನೋಯ್, ಕಾರ್ಯದರ್ಶಿ ಬಾಬುರಾಜ್ ಆರ್ಲ, ಸಣ್ಣಿ ನೆಲ್ಯಾಡಿ, ಸಿ.ತೆರೆಸ್ ಕುರಿಯನ್ ಉಪಸ್ಥಿತರಿದ್ದರು.