ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ‘ಸಮಾರೋಪ ಸಮಾರಂಭ’ ಕಾರ್ಯಕ್ರಮ ಅ.22 ರಂದು ಸ.ಉ.ಹಿ.ಪ್ರಾಥಮಿಕ ಶಾಲೆ ಕೆಮ್ಮಾರದಲ್ಲಿ ನಡೆಯಿತು.
ಯಶಸ್ವಿ ಏಳು ದಿನದ ಶಿಬಿರವನ್ನು ಪೂರ್ಣಗೊಳಿಸಲು ಸಹಕಾರಿಗಳಾದ ಗಣ್ಯರು ಮತ್ತು ಶಿಬಿರಾರ್ಥಿಗಳನ್ನು ಬೀಳ್ಕೊಡಲು ನೆರೆದಿದ್ದ ಊರವರಿಂದ ಶಾಲಾ ವಠಾರ ತುಂಬಿಕೊಂಡಿತ್ತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಎನ್ ಎಸ್ ಎಸ್ ಬದುಕು ಬದಲಿಸಬಲ್ಲ ಸಂಘಟನೆಯಾಗಿದೆ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್, ಉಪನ್ಯಾಸಕ ನೂರ್ ಮಹಮ್ಮದ್ ಬೆಂಜನಪದವು, ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್, ಉಪ್ಪಿನಂಗಡಿ ಸ.ಪ.ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಉಬಾರ್ ಸ್ಪೋಟಿಂಗ್ ಕ್ಲಬ್ ಗೌರವಾಧ್ಯಕ್ಷ ಎಂ.ಬಿ ನಝೀರ್ ಮಠ, ಮಾಜಿ ಯೋಧ ಜಯಕುಮಾರ್ ಪೂಜಾರಿ ಇಳಂತಿಲ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಆತೂರು ಸದಾಶಿವ ದೇವಸ್ಥಾನದ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಕೆಮ್ಮಾರ ಸ.ಉ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಎಂ, ಕೆಮ್ಮಾರ ಸ.ಉ.ಹಿ.ಪ್ರಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಝೀಝ್ ಬಿ.ಕೆ ಮತ್ತು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಕತ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಹಿತೋಪದೇಶವನ್ನು ನೀಡಿದರು.
ಬಳಿಕ ಮೇಲುಸ್ತುವಾರಿ ಸಮಿತಿಯಲ್ಲಿ ಸಕ್ರೀಯರಾಗಿ ಪಾಲ್ಗೊಂಡು ಶಿಬಿರದ ಯಶಸ್ವಿಯ ರೂವಾರಿಗಳಾದ ಜಯಶ್ರೀ ಎಂ, ಅಝೀಝ್ ಬಿ.ಕೆ, ಸಲೀಕತ್, ಮೋಹನ ದಾಸ್ ಶೆಟ್ಟಿ ಬಡಿಲ, ಮುಹಮ್ಮದ್ ಶರೀಫ್ ಯು.ಟಿ, ಎ ಎಸ್ ಐ ಕನಕರಾಜ್, ಪ್ರಕಾಶ್ ಕೆ ಆರ್ ಕೆಮ್ಮಾರ, ವಾಮನ ಬರಮೇಲು, ಪದ್ಮನಾಭ ಶೆಟ್ಟಿ ಬಡಿಲ ಮತ್ತು ಸೀತಾರಾಮ ಗೌಡ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಶುಭಾಷ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕೊಯಿಲ ಗ್ರಾಮ ಪಂಚಾಯತ್ ಸದಸ್ಯೆ ಸಫೀಯ, ನೀತಾ ಮತ್ತು ನಿವೃತ್ತ ಅರಣ್ಯರಕ್ಷಕ ಹರಿನಾರಾಯಣ ಕೆಮ್ಮಾರ, ಉಪ್ಪಿನಂಗಡಿ ಸ.ಪ.ಪೂ ಕಾಲೇಜು ಸಿಡಿಸಿ ಸದಸ್ಯ ಆದಂ ಕೊಪ್ಪಳ, ಶಿವಶಂಕರ್ ನಾಯಕ್, ಪ್ರಕಾಶ್ ಕೆ ಆರ್.ಹಿರೆಬಂಡಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ಶಾಂಭವಿ, ಸದಸ್ಯರಾದ ಹೇಮಂತ್ ಮೈತ್ತಲಿಕೆ, ಹಮ್ಮಬ್ಬ ಶೌಕತ್ ಅಲಿ ಉಪಸ್ಥಿತರಿದ್ದರು.
ಶಿಬಿರ ಸಂಯೋಜಕ ರಮೇಶ್ ಹೆಚ್ ಜಿ ಇವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಊರಿನವರ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು. ಶ್ರುತಿ ಮತ್ತು ಶ್ರೇಯ ಪ್ರಾರ್ಥನೆ ನಡೆಯಿತು. ಶಿಬಿರಾರ್ಥಿಗಳ ಪರವಾಗಿ ಯಶಸ್ವಿನಿ ಮತ್ತು ಚರಣ್ ರಾಜ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಉಪನ್ಯಾಸಕ ಪ್ರಸಾದ್ ಸ್ವಾಗತಿಸಿ, ರಮೇಶ್ ಹೆಚ್. ಜಿ ಇವರು ವಂದಿಸಿದರು. ಉಪನ್ಯಾಸಕ ಝುಬೈರ್ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.