13 ಗಂಟೆಗಳ ನಿರಂತರ ಸ್ಪರ್ಧಾ ಕಾರ್ಯಕ್ರಮ – ಮುಲಿಹಿತ್ಲು (ಪ್ರ), ಪೊಳಲಿ ಟೈಗರ‍್ಸ್(ದ್ವಿ), ಕಲ್ಲೇಗ ಟೈಗರ‍್ಸ್(ತೃ)
ಪುತ್ತೂರು: ತುಳುನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ ಹುಲಿವೇಷ ಕುಣಿತ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗು ಮುಂದಿನ ಪೀಳಿಗೆಗೆ ತಲುಪಿಸಲು ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಅ.22ರಂದು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆದ ’ಪುತ್ತೂರುದ ಪಿಲಿಗೊಬ್ಬು-2023’ರಲ್ಲಿ ಮುಲಿಹಿತ್ಲು ಫ್ರೆಂಡ್ಸ್‌ನ ಜಗದಾಂಬ ಹುಲಿ (ಪ್ರ), ಕೊರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ‍್ಸ್(ದ್ವಿ), ಕಲ್ಲೇಗ ಟೈಗರ‍್ಸ್ ಪುತ್ತೂರು (ತೃ) ಸ್ಥಾನ ಪಡೆದು ಕೊಂಡಿದೆ.
ಬೆಳಗ್ಗೆ ಗಂಟೆ 11ಕ್ಕೆ ಪಿಲಿಗೊಬ್ಬು ಉದ್ಘಾಟನೆಯ ಬಳಿಕ ಮಧ್ಯಾಹ್ನ ಒಂದೂವರೆಗಂಟೆ ಸುಮಾರಿಗೆ ಸ್ಪರ್ಧಾ ಕಾರ್ಯಕ್ರಮ ಆರಂಭಗೊಂಡು ನಿರಂತರ 13 ಗಂಟೆ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಟ್ಟು 10 ಹುಲಿ ವೇಷ ತಂಡಗಳು ಭಾಗವಹಿಸಿತ್ತು. ಪ್ರತಿ ತಂಡಕ್ಕೆ 23 ನಿಮಿಷ ಕಾಲಾವಕಾಶ ಮತ್ತು 1 ನಿಮಿಷ ಪುತ್ತೂರುದ ಹುಲಿ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಈ ಪೈಕಿ ಮುಳಿಹಿತ್ಲು ಫ್ರೆಂಡ್ಸ್ ಪ್ರಥಮ ಸ್ಥಾನ ರೂ. 3 ಲಕ್ಷ ನಗದು ಮತ್ತು ಹುಲಿ ಮುಖವಾಡ ಪಡೆದರೆ, ಪೊಳಲಿ ಟೈಗರ‍್ಸ್ ದ್ವೀತಿಯ ಸ್ಥಾನವಾಗಿ ರೂ. 2ಲಕ್ಷ ನಗದು ಮತ್ತು ಹುಲಿ ಮುಖವಾಡ ಪಡೆದರು. ಕಲ್ಲೇಗ ಟೈಗರ‍್ಸ್ ತೃತಿಯ ಬಹುಮಾನವಾಗಿ ರೂ. 1ಲಕ್ಷ ನಗದು ಮತ್ತು ಹುಲಿ ಮುಖವಾಡ ಪಡೆದರು. ತಾಸೆಯಲ್ಲಿ ಮುಲಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಾಂಬ ಹುಲಿ, ಬಣ್ಣಗಾರಿಕೆಯಲ್ಲಿ ಎಸ್.ಕೆ.ಪಿ ಕುಂಪಲ ಸ್ವಾಮಿ ಕೊರಗಜ್ಜ ಕುಂಪಲ, ಧರಣಿ ಮಂಡಲದಲ್ಲಿ ಎಸ್.ಕೆ.ಪಿ ಕುಂಪಲ, ನಾಣ್ಯ ತೆಗೆಯುವಲ್ಲಿ ಎಸ್.ಕೆ.ಪಿ ಕುಂಪಲ, ಮುಡಿ ಒಡೆಯುವಲ್ಲಿ ಬಿ.ಎಸ್.ಮೂಡುಶೆಡ್ಡೆ ತಂಡದ ವಿಷ್ಣು ಪಿಲಿಕುಲ, ಸಣ್ಣ ಹುಲಿಯಲ್ಲಿ ಕಲ್ಲೇಗ ಟೈಗರ‍್ಸ್ ತಂಡದ ಶೈಲು ಪುತ್ತೂರು, ಕಪ್ಪು ಹುಲಿಯಲ್ಲೂ ಕಲ್ಲೇಗ ಟೈಗರ‍್ಸ್ ಪುತ್ತೂರು ಹಾಗು ಹೊಸದಾಗಿ ಸೇರ್ಪಡೆಗೊಂಡ ತಾಯಿ ಹುಲಿಯಲ್ಲಿ ಮಂಗಳೂರು ಫ್ರೆಂಡ್ಸ್ ಟೈಗರ‍್ಸ್ ಮುಲಿಹಿತ್ಲು ಬಹುಮಾನ ಪಡೆದು ಕೊಂಡಿದೆ. ಚಾಂಪಿಯನ್ ಹುಲಿ ಮತ್ತು ಪುತ್ತೂರುದ ಹುಲಿಯಾಗಿ ಮುಲಿಹಿತ್ಲು ಪ್ರೆಂಡ್ಸ್ ಜಗದಾಂಬ ಹುಲಿ ತಂಡದ ಪವನ್, ಶಿಸ್ತಿನ ತಂಡವಾಗಿ ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಅವರು ಬಹುಮಾನ ಪಡೆದು ಕೊಂಡರು. ಸ್ಪರ್ಧೆಯ ತೀರ್ಪುಗಾರರಾದ ಕದ್ರಿ ನವನೀತ್ ಶೆಟ್ಟಿ, ಸತೀಶ್ ಹೊಯಿಗೆ ಬಜಾರ್ ಮಂಗಳೂರು, ರೋಹಣ್ ತೊಕ್ಕೊಟ್ಟು, ಲಯನ್ ತಾರನಾಥ ಶೆಟ್ಟಿ ಬೋಲಾರ್ ಅವರು ವಿಜೇತರನ್ನು ಘೋಷಣೆ ಮಾಡಿದರು. ವಿಜಯ ಸ್ರಾಮಾಟ್‌ನ ಸ್ಥಾಪಕರು ಮತ್ತು ಪುತ್ತೂರುದ ಪಿಲಿಗೊಬ್ಬು-2023ನೇ ಸಮಿತಿಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ, ಅಧ್ಯಕ್ಷ ಉಮೇಶ್ ನಾಯಕ್, ಪಿಲಿಗೊಬ್ಬು ಸಮಿತಿ ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷ ಸಂದೀಪ್ ರೈ ನಂಜೆ, ದೇವಿಪ್ರಸಾದ್ ಭಂಡಾರಿ, ಕಾರ್ಯದರ್ಶಿ ಸುರೇಶ್ ಪಿಡಪಟ್ಲ, ಶರತ್ ಕುಮಾರ್ ಮಾಡಾವು, ಜೊತೆ ಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿ ಅಶೋಕ್ ಅಡೂರು, ಕೋಶಾಧಿಕಾರಿ ರಾಜೆಶ್ ಕೆ. ಗೌಡ, ಸಂಘಟನಾ ಕಾರ್ಯದರ್ಶಿ ಉದಯ್ ಪಾಟಾಳಿ ಬೆಳ್ಳಾರೆ,ಸಂಘಟನಾ ಕಾರ್ಯದರ್ಶಿ ಅರುಣ್ ರೈ, ಆದರ್ಶ ಉಪ್ಪಿನಂಗಡಿ ಸಹಿತ ಸಮಿತಿ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು. ವಿಜೆ ವಿಖ್ಯಾತ್ ಮತ್ತು ಆರ್.ಜೆ.ಅನುರಾಗ್ ಸ್ಪರ್ಧಾ ಕಾರ್ಯಕ್ರಮ ನಿರೂಪಣೆ ಮಾಡಿದರು.