ಪುತ್ತೂರಿನಲ್ಲಿ ಜಗಮಗಿಸಿದ ಪೇಟೆಯ ದೀಪಾಲಂಕಾರದಲ್ಲಿ ಪುತ್ತೂರು ಶಾರದೋತ್ಸವದ ವೈಭವದ ಶೋಭಾಯಾತ್ರೆ

0

ಡಿ.ಜೆಯಿಲ್ಲದೆ ಮೇಳೈಸಿದ ಭಾರತೀಯ ಸಂಸ್ಕೃತಿ ವೈಭವ
ಸ್ತಬ್ದ ಚಿತ್ರಗಳೊಂದಿಗೆ ವಿವಿಧ ಕಡೆಗಳ ಸಂಸ್ಕೃತಿ ಪ್ರದರ್ಶನ
80 ತಂಡಗಳ 1400 ಕುಣಿತ ಭಜಕರು 1200 ನಿತ್ಯ ಭಜಕರು
ಅಲ್ಲಲ್ಲಿ ಸುಡುಮದ್ದು ಪ್ರದರ್ಶನ

ಗಮನ ಸೆಳೆದ ಚಂದ್ರಯಾನ-3
ಬೊಳುವಾರಿನಿಂದ ದರ್ಬೆತನಕ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಪೇಟೆ

ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣ ಸುತ್ತಿನಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಅಂಗವಾಗಿ 89ನೇ ವರ್ಷದ ಶಾರದೋತ್ಸವವು ವಿಜೃಂಭಣೆಯಿಂದ ನಡೆದು, ಅ.24ರಂದು ಶಾರದೋತ್ಸವದ ಶೋಭಾಯಾತ್ರೆಯು ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ವೈಭವೋಪೇತವಾಗಿ ನಡೆಯಿತು.ಪುತ್ತೂರು ಪೇಟೆಯಲ್ಲಿ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಶಾರದೋತ್ಸವ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ನೀಡಿತ್ತು.
ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶಾರದೆ ಮಾತೆಯ ವಿಗ್ರಹದ ಶೃಂಗಾರದ ಬಳಿಕ ಸಂಜೆ ಗಂಟೆ 5.30ರ ಸುಮಾರಿಗೆ ಹೊರಾಂಗಣಕ್ಕೆ ತಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಕೆರೆಯ ಬಳಿಯಿಂದ ಅಲಂಕೃತ ರಥದಲ್ಲಿ ಶಾರದೆ ವಿಗ್ರಹವನ್ನು ಬೊಳುವಾರಿಗೆ ಕೊಂಡೊಯ್ದು ಅಲ್ಲಿಂದ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಶೋಭಾಯಾತ್ರೆಯು ಪುತ್ತೂರು ಪೇಟೆಯಲ್ಲಿ ಸಾಗಿ ದರ್ಬೆ ಪರ್ಲಡ್ಕವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಕೆರೆಯಲ್ಲಿ ಶಾರದೆ ವಿಗ್ರಹದ ಜಲಸ್ಥಂಭನಗೊಳಿಸಲಾಯಿತು.


ಬೊಳುವಾರಿನಲ್ಲಿ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಅರ್ಚಕ ಸುಧಾಮ ಅವರು ಪ್ರಾರ್ಥನೆ ನೆರವೇರಿಸಿ, ಮಂತ್ರಾಲಯದ ಮುಂದೆ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಭಗವಧ್ವಜಾರೋಹಣ ಮಾಡಿದರು.ಬಳಿಕ ಶಾರದೋತ್ಸವ ಶೋಭಾಯಾತ್ರೆಯ ಸಂಚಾಲಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಮತ್ತು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಅವರ ಮುಂದಾಳತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮಹಾವೀರ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ, ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ, ಸಂಚಾಲಕ ಪಿ.ಜಿ.ಜಗನ್ನಿವಾಸ ರಾವ್, ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆ.ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಅವರು ತೆಂಗಿನ ಕಾಯಿ ಒಡೆದರು.ಶಾರದಾ ಮಾತೆಯ ವಿಗ್ರಹ ರಥ ಮತ್ತು ಹುಲಿ ವೇಷದ ಮುಖವಾಡ ಇರುವ ರಥದ ನಡುವೆ ತೆರೆದ ಜೀಪಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿ ಧ್ವಜಾರೋಹಣ ಮಾಡಿ ಪುಷ್ಪಾರ್ಚನೆ ಮಾಡಿ ಶೋಭಾಯಾತ್ರೆಗೆ ಅಽಕೃತ ಚಾಲನೆ ನೀಡಿದರು.ಈ ಸಂದರ್ಭ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು,ಶ್ರೀಧರ ಪಟ್ಲ, ಪುರುಷೋತ್ತಮ ಮುಂಗ್ಲಿಮನೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ, ಲಿಂಗಪ್ಪ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಶಾರದೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಶೋಭಾಯಾತ್ರೆ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್, ಧನ್ಯ ಕುಮಾರ್ ಬೆಳಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನಯನಾ ರೈ ನೆಲ್ಲಿಕಟ್ಟೆ, ಹರಿಣಾಕ್ಷಿ ಜೆ.ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹೆಚ್.ಉದಯ, ಹಿಂದು ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ರಮೇಶ್ ಬಾಬು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನೀಲಂತ್ ಬೊಳುವಾರು, ಪಿ.ಜಿ.ಚಂದ್ರಶೇಖರ್ ರಾವ್, ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಶೀನಪ್ಪ ನಾಯ್ಕ್, ಹಿಂದು ಜನಜಾಗೃತಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ನ್ಯಾಯವಾದಿ ವಿರೂಪಾಕ್ಷ ಭಟ್, ರತ್ನಾಕರ ರೈ ಕೆದಂಬಾಡಿ, ವಿನಯ ಗೌಡ ಕಲ್ಲೇಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಶೋಭಾಯಾತ್ರೆಯಲ್ಲಿ ಆರಂಭದಲ್ಲಿ ಧ್ವಜ ಇರುವ ತೆರೆದ ವಾಹನ, ಮಹಾಲಿಂಗೇಶ್ವರ ದೇವರ ಭಾವಚಿತ್ರ ಹೊಂದಿರುವ ತೆರೆದ ವಾಹನ, ಭಜನೆ ತಂಡಕ್ಕೆ ಧ್ವನಿವರ್ಧಕ ವಾಹನ, ಭಜನಾ ಕುಣಿತ ತಂಡಗಳು, ಮಧ್ಯ ಧ್ವನಿವರ್ಧಕ ವಾಹನ, ಭಜನಾ ಕುಣಿತ ತಂಡಗಳು, ಕೊನೆಯ ಧ್ವನಿವರ್ಧಕ ವಾಹನದ ಬಳಿಕ ನಾಡಿನ ವಿವಿಧ ಕಲಾತಂಡಗಳ ಪ್ರದರ್ಶನವಿತ್ತು.ಪಟದ ಕುಣಿತ, ತ್ರಿಶೂರ್ ಕೊಡೆ, ಪೂಜಾ ಕುಣಿತ, ಭಾರತ ಮಾತೆಯ ಭಾವಚಿತ್ರ ಇರುವ ತೆರೆದ ಜೀಪ್, ವೀರಭದ್ರ ಕುಣಿತ, ಒಕ್ಕಲಿಗ ಗೌಡ ಸೇವಾ ಸಂಘದಿಂದ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡರ ಸ್ತಬ್ದ ಚಿತ್ರ, ಮುಳಿಯ ಚಂಡೆ, ಬೃಹತ್ ಆಕಾರದ ಹನುಮಂತ ವೇಷಧಾರಿ, ಮಹಾದೇವಿ ಕಬಕದಿಂದ ಚಂದ್ರಯಾನ-೩ ಸ್ತಬ್ದ ಚಿತ್ರ, ಮಹಿಳಾ ಕೋಲಾಟ, ಬ್ರಹ್ಮನಗರದಿಂದ ಶಿವಲಿಂಗ ಲೀಲಾ ಚಿತ್ರ, ಕೇರಳ ಸಿಂಗಾರಿ ಮೇಳ, ವೀರ ಸಾವರ್ಕರ್ ಭಾವ ಚಿತ್ರದ ತೆರೆದ ವಾಹನ, ಡೊಳ್ಳು ಕುಣಿತ, ಸೋಮನ ಕುಣಿತ, ಕಂಸಾಳೆ ಕುಣಿತ, ಕೇಸರಿ ಧ್ವಜ ತಂಡ, ನಿತ್ಯ ಭಜನೆ ತಂಡ, ಡಾ|ಪಿ.ಕೆ.ಗಣೇಶ್ ಸ್ಯಾಕ್ಸೋ-ನ್ ವಾದನ ಶೋಭಾಯಾತ್ರೆಗೆ ಮೆರುಗು ನೀಡಿತ್ತು.ಕೊನೆಗೆ ಸುಂದರ ಅಲಂಕೃತ ರಥದಲ್ಲಿ ಶಾರದಾ ಮಾತೆಯ ವಿಗ್ರಹ ಭಕ್ತರ ಗಮನ ಸೆಳೆಯಿತು.ಆದರ್ಶ ಆಸ್ಪತ್ರೆಯ ದಯಾನಂದ ಅವರು ರಥದ ಚಾಲಕರಾಗಿದ್ದರು.


ನಾಡಿನ ವಿವಿಧ ಭಾಗಗಳಿಂದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಕಲಾ ತಂಡಗಳು:ನಾಡಿನ ವಿವಿಧ ಭಾಗಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು.ಅದರಲ್ಲಿ ಪ್ರಮುಖವಾಗಿ ಕೇರಳ ಚೆಂಡೆ, ಗೊಂಬೆ ಬಳಗ, ಕೀಲು ಕುದುರೆ, ಪೂಜಾ ಕುಣಿತ ಮಂಡ್ಯ, ಡೊಳ್ಳು ಕುಣಿತ ರಾಮನಗರ, ವೀರಭದ್ರ ಕುಣಿತ ಮಳವಳ್ಳಿ, ಸೋಮನಕುಣಿತ ಮಾಗಡಿ, ಕಂಸಾಳೆ, ಕೊಳ್ಳೇಗಾಲ ಮಹಿಳಾ ಕೋಲಾಟ, ಮದ್ದೂರು ಕಲಾ ತಂಡಗಳು ಮತ್ತು ನಾಸಿಕ್ ಬ್ಯಾಂಡ್ ತಮ್ಮ ಶೋಭಾಯಾತ್ರೆ ಉದ್ದಕ್ಕೂ ತಮ್ಮ ಕಲಾ ಪ್ರದರ್ಶನ ನೀಡಿತು.

ಪೇಟೆ ರಸ್ತೆಯುದ್ದಕ್ಕೂ ದೀಪಾಲಂಕಾರ
ಶಾರದೋತ್ಸವದ ಶೋಭಾಯಾತ್ರೆ ಸಂಭ್ರಮದಲ್ಲಿ ಶೋಭಾಯಾತ್ರೆ ಸಮಿತಿ ವತಿಯಿಂದ ದರ್ಬೆಯಿಂದ ಬೊಳುವಾರು ತನಕ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ದೀಪಾಲಂಕಾರ ಮಾಡಲಾಗಿತ್ತು.ಇದೀಗ ಪುತ್ತೂರು ಶಾರದೋತ್ಸವದಲ್ಲಿ ಪೇಟೆಯುದ್ದಕ್ಕೂ ರಸ್ತೆಗೆ ಅಡ್ಡಲಾಗಿ ಮತ್ತು ದರ್ಬೆಯಲ್ಲಿ ರಸ್ತೆ ವಿಭಜಕದ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ಜೊತೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಳಿಸಲಾಗಿದೆ.


13 ಕಡೆ ಕಲಾ ಪ್ರದರ್ಶನ
ಶೋಭಾಯಾತ್ರೆಯಲ್ಲಿ ಭಾಗವಹಿಸುವ ಕಲಾ ತಂಡಗಳು ತಮ್ಮ ಪ್ರದರ್ಶನವನ್ನು ತೋರಿಸಲು ಈ ಬಾರಿ ಹೊಸ ಯೋಜನೆ ರೂಪಿಸಲಾಗಿದ್ದು, ನೋಡುಗರಿಗೆ ಅನುಕೂಲವಾಗುವಂತೆ ಆಯ್ದ 13 ಕಡೆಗಳಲ್ಲಿ ಕಲಾ ತಂಡಗಳು ಪ್ರದರ್ಶನ ನೀಡಿವೆ.ಆರಂಭಿಕ ಪ್ರದರ್ಶನವಾಗಿ ಬೊಳುವಾರು ವೃತ್ತದಲ್ಲಿ, ಮುಂದೆ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು, ಮಹಾವೀರ ಆಸ್ಪತ್ರೆ ದ್ವಾರದ ಎದುರು, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಮತ್ತು ಹೆಗ್ಡೆ ಆರ್ಕೇಡ್ ಮಧ್ಯೆ, ಜಿ.ಎಲ್.ಕಾಂಪ್ಲೆಕ್ಸ್ ಮತ್ತು ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮಧ್ಯೆ, ಎಂ.ಸಂಜೀವ ಶೆಟ್ಟಿ ಇನ್ನೊಂದು ಮಳಿಗೆಯ ಬಳಿ, ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದ ಬಳಿ, ಅರುಣಾ ಚಿತ್ರ ಮಂದಿರದ ಬಳಿ, ಕಲ್ಲಾರೆ ಜಂಕ್ಷನ್ ಬಳಿ, ರಿಲಾಯನ್ಸ್ ಮತ್ತು ಹರ್ಷ ಮಳಿಗೆಯ ಬಳಿ, ದರ್ಬೆ ವೃತ್ತದ ಬಳಿ, ಸಂತ ಫಿಲೋಮಿನಾ ಕಾಲೇಜು ಮತ್ತು ಪರ್ಲಡ್ಕ ಕ್ರಾಸ್ ಬಳಿ ಕಲಾ ತಂಡಗಳು ಮತ್ತು ಸ್ತಬ್ಧ ಚಿತ್ರಗಳು ತಮ್ಮ ಕಲಾ ಪ್ರದರ್ಶ ನೀಡಿದ್ದು, ನೋಡುಗರು ಈ ಸ್ಥಳದಲ್ಲಿ ಪ್ರದರ್ಶನ ವೀಕ್ಷಣೆ ಮಾಡಿದರು.

ಶಾರದಾ ವಿಗ್ರಹ ಜಲಸ್ತಂಭನಕ್ಕೆ ಹೊಸ ತಂತ್ರಜ್ಞಾನ
ಪುತ್ತೂರು ಶಾರದೋತ್ಸವದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ಜಲಸ್ತಂಭನಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಸಲಾಗಿತ್ತು.ಶಾರದೆಯನ್ನು ನೀರಿನಲ್ಲಿ ನಿಧಾನವಾಗಿ ಇಳಿಸುವ ಮೂಲಕ ಜಲಸ್ತಂಭನಗೊಳಿಸಲಾಯಿತು.ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಶ್ರೀಕೃಷ್ಣ(ತಮ್ಮಣ್ಣ) ಅವರ ಚಿಂತನೆಯಂತೆ ವಿಟ್ಲದ ಲಕ್ಷ್ಮಣ ಪೂಜಾರಿ ಮತ್ತು ಅನಂತಪ್ರಸಾದ್ ಅವರು ಕಬ್ಬಿಣ ಚಾನಲ್ ನಿರ್ಮಾಣ ಮಾಡಿದ್ದಾರೆ.ಈ ಚಾನಲ್ ಅನ್ನು
ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕೆರೆಗೆ ಅಳವಡಿಸಲಾಗಿತ್ತು.ಚಾನಲ್ ಮೇಲೆ ಶಾರದಾ ಮಾತೆಯ ವಿಗ್ರಹವನ್ನು ಇರಿಸಿ ನಿಧಾನವಾಗಿ ನೀರಿನ ಆಳಕ್ಕೆ ಇಳಿಸಲಾಯಿತು.ಶಾರದಾ ಮಾತೆಯ ವಿಗ್ರಹ ಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾದ ಬಳಿಕ ವಿಗ್ರಹದ ಪೀಠವನ್ನು ಚಾನಲ್‌ನಿಂದ ಪ್ರತ್ಯೇಕಗೊಳಿಸಲಾಯುತು.ಈ ವಿಶೇಷ ತಂತ್ರಜ್ಣಾನ ಬಳಸಿ ಜಲಸ್ತಂಭನ ಮಾಡುವಲ್ಲಿ ಕಿರಣ್ ಉರ್ಲಾಂಡಿ ಮತ್ತು ಸುಽರ್ ಸಹಕರಿಸಿದರು.

ಶಾರದೆ ಮಾತೆಗೆ ಜೆಲ್ಲಿ (ಸೋನಾಪೂಲ್)ಮುಡಿ ಅಲಂಕಾರ
ಶಾರದಾ ಭಜನಾ ಮಂದಿರದ ಶಾರದಾ ಮಾತೆಯ ವಿಗ್ರಹಕ್ಕೆ ಪ್ರಥಮ ಬಾರಿಗೆ ಜೆಲ್ಲಿ ಯಾ ಕೊಂಕಣಿ ಭಾಷೆಯಲ್ಲಿ ಉಲ್ಲೇಖವಿರುವ ಸೋನಾಪೂಲ್ ಮುಡಿಯಲ್ಲಿ ಶೃಂಗರಿಸಲಾಗಿತ್ತು.ವೇ.ಮೂ ವೆಂಕಟೇಶ್ ಭಟ್ ಅವರ ನೇತೃತ್ವದಲ್ಲಿ ರಾಘವೇಂದ್ರ ಭಟ್ ಮಂಗಳೂರು, ಧನಲಕ್ಷ್ನೀ ಪೈ, ಸೌಮ್ಯ ಶಾನ್‌ಭಾಗ್ ಬೆಂಗಳೂರು, ಶಾಂತೇರಿ ಭಟ್, ಸ್ವಾತಿ ಗಡಿಯಾರ್ ಸಹಿತ ಅನೇಕರು ಶಾರದಾ ಮಾತೆಯ ಶೃಂಗಾರದಲ್ಲಿ ಪ್ರದಾನ ಪಾತ್ರ ವಹಿಸಿದ್ದರು. ಸುಮಾರು 30 ಅಟ್ಟಿ ಮಲ್ಲಿಗೆಯಲ್ಲಿ ಶಾರದಾ ಮಾತೆಯ ಶೃಂಗಾರ ಮಾಡಲಾಯಿತು. ಮಂಗಳೂರು ಮಲ್ಲಿಗೆ ಹೆಚ್ಚಾಗಿ ಬಳಸಿದ್ದು, ಶಾರದಾ ಮಾತೆಯ ವಿಗ್ರಹ ಶಿಲ್ಪಿ ಶ್ರೀನಿವಾಸ್ ಪ್ರಭು ಪ್ರಧಾನ ಅಲಂಕಾರದ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here