ಪುತ್ತೂರು ಶಾರದೋತ್ಸವದಲ್ಲಿ ಹಲವು ಹೊಸತನ ವಿಶೇಷತೆಗಳು

0


ಭವ್ಯ ಶೋಭಯಾತ್ರೆ, ಜೆಲ್ಲಿ ಮುಡಿ ಶೃಂಗಾರ, ಚಾನಲ್ ಬಳಸಿ ಜಲಸ್ತಂಭನ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣ ಸುತ್ತಿನಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಅಂಗವಾಗಿ 89ನೇ ವರ್ಷದ ಶಾರದೋತ್ಸವವು ಈ ಭಾರಿ ಹಲವು ಪ್ರಥಮ ಮತ್ತು ಹೊಸತನಗಳಿಗೆ ಮಾದರಿಯಾಯಿತು.
ಅ.24ರಂದು ಶಾರದೋತ್ಸವದ ವೈಭವದ ಶೋಭಯಾತ್ರೆಯು ಶೋಭಯಾತ್ರೆ ನಡೆದರೆ ಶಾರದೆ ಮಾತೆಯನ್ನು ಜೆಲ್ಲಿ ಮುಡಿಯಿಂದ ಶೃಂಗಾರಗೊಳಿಸಲಾಯಿತು. ಮತ್ತೊಂದು ಕಡೆ ಭಾರತೀಯ ಸಂಸ್ಕೃತಿ ಪರಂಪರೆಗಳನ್ನೊಳಗೊಂಡ ಶೋಭಯಾತ್ರೆಯಲ್ಲಿ ಸರ್ವಾಲಂಕೃತಳಾಗಿ ಕಂಗೊಳಿಸಿದ ಶ್ರೀ ಶಾರದಾ ಮಾತೆಯ ವಿಗ್ರಹ ಜಲಸ್ತಂಭನವನ್ನು ಚಾನಲ್ ಬಳಸಿ ನಿಧಾನವಾಗಿ ನೀರಿಗೆ ಇಳಿಸುವ ಮೂಲಕ ಜಲಸ್ತಂಭನ ವಿಶೇಷತೆಯನ್ನು ಕಂಡಿತ್ತಲ್ಲದೆ ಇತರ ಎಲ್ಲಾ ಉತ್ಸವಗಳಿಗೂ ಇದು ಮಾದರಿಯಾಯಿತು.

LEAVE A REPLY

Please enter your comment!
Please enter your name here