ಪುತ್ತೂರು: ವಿದುಷಿ ನಿಖಿತ ಪಾಣಾಜೆಯವರ ಭರತನಾಟ್ಯ ಹಾಗೂ ಚಿತ್ರಕಲಾ ತರಗತಿಗಳ ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್ ಅ.24ರಂದು ಎಪಿಎಂಸಿ ರಸ್ತೆಯ ಜೆಎಂಜೆಂ ಕಾಂಪ್ಲೆಕ್ಸ್ನ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಮೈಸೂರಿನ ವಿದುಷಿ ಚೇತನಾ ರಾಧಾಕೃಷ್ಣ ಮಾತನಾಡಿ, ಕಲಾ ಪ್ರಕಾರಗಳ ಕಲಿಕೆಗೆ ಬಂದ ವಿದ್ಯಾರ್ಥಿಗಳನ್ನು ತಾರತಮ್ಯ ಮಾಡದೆ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಹೇಳಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ, ಭಾರತೀಯ ಕಲಾ ಪ್ರಕಾರಗಳನ್ನು ಕಲಿಯುವುದರಿಂದ ಉತ್ತಮ ಕಲಾವಿದ ಆಗಬಹುದು ಅಥವಾ ಉತ್ತಮ ಪ್ರೇಕ್ಷಕನಾಗಬಹುದು. ಅದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು.
ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್ ಶಿಕ್ಷಕಿ ವಿದುಷಿ ನಿಖಿತ ಪಾಣಾಜೆ ಮಾತನಾಡಿ, ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್. ಭರತನಾಟ್ಯ ಮತ್ತು ಚಿತ್ರ ಕಲೆಯನ್ನು ಕಲಿಸಿಕೊಡುವ ಸಂಸ್ಥೆಯಾಗಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು. ಸುಜಾತ ಮತ್ತು ಮಂಜುನಾಥ ಸ್ವಾಗತಿಸಿದರು. ರೂಪಲೇಖ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.