ಮಳೆಕೊಯ್ಲು, ಸೋಲಾರ್ ಗ್ರಿಡ್ ಪ್ರಯೋಜನಗಳೇನು?

0

ಮಳೆಗಾಲದಲ್ಲಿ ಮಳೆನೀರು ಉಪಯೋಗಿಸಿದರೆ, ಎಲ್ಲರೂ ಸೋಲಾರ್ ವಿದ್ಯುತ್ ಅಳವಡಿಸಿದರೆ ಏನಾಗಬಹುದು?
ನೀರು, ವಿದ್ಯುತ್ ಕ್ರಾಂತಿಯಾಗಿ ಅಭಿವೃದ್ಧಿಯಾಗಲಿಕ್ಕಿಲ್ಲವೇ?

*ಮಳೆಕೊಯ್ಲಿನಿಂದ ಶುದ್ಧ, ಉಚಿತ ನೀರು ಬಾವಿ, ಕೊಳವೆ ಬಾವಿ ರೀಚಾರ್ಜ್, ಅಂತರ್ಜಲ ಅಭಿವೃದ್ಧಿ, ಮಣ್ಣಿನ ಸವಕಳಿ, ಕೃತಕ ನೆರೆ ತಡೆ, ಸೋಲಾರ್ ಗ್ರಿಡ್‌ನಿಂದ ವಿದ್ಯುತ್ ಕೊರತೆ ನಿವಾರಣೆ, ವಿದ್ಯುತ್ ಇಲಾಖೆಗೆ ಮಾರಾಟ, ಆದಾಯ ಗಳಿಕೆ.
*ದ.ಕ. ಜಿಲ್ಲೆಯಲ್ಲಿ, ಬೆಳ್ತಂಗಡಿ ತಾಲೂಕಿನಲ್ಲಿ ನಮಗೆ ವರ್ಷಕ್ಕೆ 4000 ಮಿ.ಮೀ.ನಷ್ಟು ಮಳೆ ಬರುತ್ತದೆ. ಅಂದರೆ 1000 ಚದರ ಅಡಿಯ ಚಾವಣಿಯ ಮೇಲೆ ವರ್ಷಕ್ಕೆ 4 ಲಕ್ಷ ಲೀಟರ್ ಮಳೆ ನೀರು ಬೀಳುತ್ತದೆ. 4 ಜನ ವಾಸವಾಗಿರುವ ಆ ಮನೆಯವರಿಗೆ ವರ್ಷಕ್ಕೆ ಬೇಕಾಗುವ 2 ಲಕ್ಷ ಲೀಟರ್‌ಗಿಂತ ದುಪ್ಪಟ್ಟು ಮಳೆನೀರು ಮನೆಯ ಚಾವಣಿಯ ಮೇಲೆ ಬೀಳುತ್ತದೆ.
*25 ಮಿ.ಮೀ. ಮಳೆ ಬಿದ್ದಲ್ಲಿ ಆ ದಿನ 2500 ಲೀಟರ್ ನೀರು 1000 ಚದರ ಅಡಿ ಮನೆಯ ಚಾವಣಿಯಿಂದ ಸಂಗ್ರಹಿಸಬಹುದು. ಅಂದರೆ 5 ದಿನಕ್ಕೆ ಬೇಕಾದಷ್ಟು ನೀರು ಆ ದಿವಸದಲ್ಲಿ ಮಳೆ ನೀರಿನಲ್ಲಿ ದೊರಕುತ್ತದೆ.
*ಆ ಶುದ್ಧ ನೀರನ್ನು ಶೇಖರಿಸಿ ಉಪಯೋಗಿಸಿದರೆ, ಹಾಗೆ ಮಾಡುತ್ತಾ ಇದ್ದರೆ ಮಳೆಗಾಲವಿಡೀ ಮಳೆನೀರನ್ನೇ ಅವಲಂಭಿಸಬಹುದು. ಇತರ ಯಾವುದೇ ನೀರನ್ನು ಉಪಯೋಗಿಸಬೇಕೆಂದಿಲ್ಲ.
*5000 ಲೀಟರ್‌ನ ಶೇಖರಣಾ ಟ್ಯಾಂಕಿ ಇದ್ದರೆ 10 ದಿನಕ್ಕೆ, 50,000 ಲೀಟರ್‌ನ ಟ್ಯಾಂಕಿ ಇದ್ದರೆ ಮಳೆಗಾಲ ಕಳೆದ ಮೇಲೂ 100 ದಿವಸ ಅದೇ ನೀರನ್ನು ಉಪಯೋಗಿಸಬಹುದು.
*ಪುತ್ತೂರಿನಲ್ಲಿ ಸುರೇಶ್ ರೈ ಎಂಬ ವಕೀಲರು ತನ್ನ ಮನೆಯಲ್ಲಿ 40,000 ಲೀಟರ್ ನೀರಿನ ಟ್ಯಾಂಕ್ ಅಳವಡಿಸಿದ್ದಾರೆ. ಮಳೆಗಾಲವಿಡೀ ಮತ್ತು ಡಿಸೆಂಬರ್‌ನವರೆಗೆ ಇದೇ ನೀರನ್ನು ಉಪಯೋಗಿಸುತ್ತಾರೆ. ಇತರ ಯಾವುದೇ ನೀರನ್ನು ಉಪಯೋಗಿಸುವುದಿಲ್ಲ.
*ಯಾವುದೇ ಮನೆಯವರು, ಗುಡ್ಡೆಯಲ್ಲಿ ವಾಸವಾಗಿರುವ ಮನೆಯವರು ಕೂಡ ಮಳೆನೀರು ಕೊಯ್ಲುನ ಮೂಲಕ ಮಳೆಗಾಲ ಉಚಿತ ಶುದ್ಧ ನೀರಿನ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು.
*ಪಂಚಾಯತ್ ಆಗಲೀ, ನಗರಸಭೆಗಳಾಗಲೀ ಮಳೆಗಾಲದಲ್ಲಿ ಎಲ್ಲಾ ಮನೆಯವರು ಮಳೆಕೊಯ್ಲಿನ ನೀರನ್ನೇ ಅವಲಂಭಿಸುವಂತೆ ಮಾಡಿದರೆ ಜನರಿಗೆ ಶುದ್ಧವಾದ ನೀರು ದೊರಕುವುದಲ್ಲದೆ, ಖರ್ಚು ಉಳಿತಾಯವಾಗುತ್ತದೆ.
ಮಳೆಗಾಲದಲ್ಲಿ ಅವರ‍್ಯಾರಿಗೂ ನೀರಿನ ಸರಬರಾಜು ಇಲ್ಲದೇ ಇರುವುದರಿಂದ ಮನೆಯವರ, ಪಂಚಾಯತ್ ಮತ್ತು ನಗರಸಭೆಯವರ ಬಾವಿಯಲ್ಲಿ ಮತ್ತು ಕೊಳವೆ ಬಾವಿಯಲ್ಲಿಯ ನೀರು ಕಡಿಮೆ ಆಗದೆ ಹಾಗೆ ಉಳಿದು ಬೇಸಿಗೆಯಲ್ಲಿ ಉಪಯೋಗಕ್ಕೆ ಬರುತ್ತದೆ.
*ಮಳೆಕೊಯ್ಲಿನ ಮೂಲಕ ಮಳೆಗಾಲದಲ್ಲಿ ನೀರನ್ನು ಉಪಯೋಗಿಸುವುದಲ್ಲದೆ ಬಾವಿ, ಕೆರೆ, ಕೊಳವೆ ಬಾವಿಗಳನ್ನು ರೀಚಾರ್ಜ್ ಮಾಡಿ ಭೂಮಿಯ ಅಂತರ್ಜಲವನ್ನು ವೃದ್ಧಿ ಮಾಡಿ, ನೀರಿನ ಕೊರತೆ ಎಂದಿಗೂ ಬಾರದಂತೆ ನೋಡಿಕೊಳ್ಳಬಹುದು.
*ನಮ್ಮ ಒಂದು ಎಕರೆ ಭೂಮಿಯಲ್ಲಿ 1 ಕೋಟಿ 60 ಲಕ್ಷ ಲೀಟರ್ ನೀರು ವರ್ಷಕ್ಕೆ ಬಿದ್ದು ಹರಿದು ಹೋಗುತ್ತದೆ ಎಂದು ತಿಳಿದರೆ, ಅದನ್ನು ಶೇಖರಿಸಿ, ಉಪಯೋಗಿಸಿದರೆ ನಮ್ಮ ಊರಿಗೆ ನೀರಿನ ಕೊರತೆ ಎಂದಾದರೂ ಬರಲು ಸಾಧ್ಯವಿದೆಯೇ, ಬೇಸಿಗೆಯಲ್ಲಿ ನೀರಿಲ್ಲ ಎಂದು ಹೇಳುವ ಎಲ್ಲರೂ ಗಂಭೀರ ಚಿಂತನೆ ಮಾಡಬೇಕಲ್ಲವೇ?
*ಮಳೆಕೊಯ್ಲು ಮಾಡುವುದರಿಂದ ಬೇಕಾದಷ್ಟು ಶುದ್ಧ ನೀರು ದೊರಕುವುದಲ್ಲದೆ ನೀರಿನ ಹರಿವು ನಿಧಾನವಾಗಿ, ಮಣ್ಣಿನ ಸವಕಳಿಯೂ ಕಡಿಮೆಯಾಗುತ್ತದೆ. ಕೃತಕ ನೆರೆ ಹಾವಳಿಯೂ ತಪ್ಪುತ್ತದೆ ಎಂಬುದು ಕೂಡ ಬಹಳ ಮುಖ್ಯವಾದ ವಿಷಯವೇ ಆಗಿದೆ.
*ನಮಗೆ ಇಲ್ಲಿ ಬೇಕಾದಷ್ಟು ಸೂರ್ಯನ ಬಿಸಿಲಿದೆ. ಬೇಸಿಗೆಯಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಸೋಲಾರ್ ತಂತ್ರಜ್ಞಾನವನ್ನು ಉಪಯೋಗಿಸಿ ಪ್ರತೀ ಮನೆಯವರು, ಕಟ್ಟಡದವರೂ ತಮಗೆ ಬೇಕಾದಷ್ಟು ವಿದ್ಯುತ್ತನ್ನು ಸಂಪಾದಿಸಬಹುದು. ಅದರಿಂದ ವಿದ್ಯುತ್‌ನ ಹಣವನ್ನೂ ಉಳಿತಾಯ ಮಾಡಬಹುದು. ವಿದ್ಯುತ್ ಇಲಾಖೆಗೆ ವಿದ್ಯುತ್ತನ್ನು ಮಾರುವ ಮೂಲಕ ಹಣವನ್ನೂ ಗಳಿಸಬಹುದು.

ಮಳೆಕೊಯ್ಲು ಮತ್ತು ಸೋಲಾರ್ ವಿದ್ಯುತ್ ಮೂಲಕ ಪ್ರತೀ ಮನೆ ಮನೆಗೆ ನೀರು ಮತ್ತು ವಿದ್ಯುತ್ ಸೌಲಭ್ಯ ದೊರಕಿದರೆ ಅದು ದೊಡ್ಡ ಕ್ರಾಂತಿಯಾಗಿ ಎಲ್ಲರೂ ಅಭಿವೃದ್ಧಿಯಾಗುವುದು ಖಂಡಿತವಲ್ಲವೇ.
ಈ ನಿಟ್ಟಿನಲ್ಲಿ ನೀರಿನ ಮೆನೇಜ್‌ಮೆಂಟ್ ಮತ್ತು ಸೋಲಾರ್ ವಿದ್ಯುತ್ ಬಗ್ಗೆ ‘ಸುದ್ದಿ ಮಾಹಿತಿ ಟ್ರಸ್ಟ್’ನ ಅರಿವು ಕೃಷಿ ವಿಭಾಗ ಕೆಲಸ ಮಾಡಲಿದೆ. ಮಾಹಿತಿ ಬೇಕಾದವರು ‘ಅರಿವು ಕೃಷಿ ವಿಭಾಗ’ವನ್ನು ಸಂಪರ್ಕಿಸಬಹುದು.

ಮಳೆಕೊಯ್ಲು, ಸೋಲಾರ್ ಗ್ರಿಡ್, ಮಾಹಿತಿ ಮತ್ತು ಸರ್ವೀಸ್‌ಗಾಗಿ
ಅರಿವು ಕೃಷಿ ಕ್ಲಿನಿಕ್
(ಸುದ್ದಿ ಸೆಂಟರ್)

ಮುಖ್ಯ ಕಛೇರಿ: ಕ್ರಿಸ್ಟೋಫರ್ ಕಾಂಪ್ಲೆಕ್ಸ್, ಎಪಿಎಂಸಿ ರಸ್ತೆ, ಪುತ್ತೂರು
ಮೊ: 805029o3990 / 6364570738
Email:[email protected]

ರಾಜಶ್ರೀ ಬಿಲ್ಡಿಂಗ್, ದ್ವಾರಕ ಹೋಟೆಲ್ ಬಳಿ,
ಮುಖ್ಯರಸ್ತೆ, ಸುಳ್ಯ ಮೊ: 9481186949

ಬೆಳ್ತಂಗಡಿ ಕೇಂದ್ರ
ಮೊ: 9449527728

ಮಂಗಳೂರು ಕೇಂದ್ರ
ಮೊ: 7090723170

LEAVE A REPLY

Please enter your comment!
Please enter your name here