ಪುತ್ತೂರು: ಕಾರಿಂಜ ಬಾಲಕೃಷ್ಣ ಆಚಾರ್ರವರ ಪೌರೋಹಿತ್ಯದಲ್ಲಿ ನೀರ್ಕಜೆ ಮೀನಾಕ್ಷಿ ಮತ್ತು ಶೇಷಪ್ಪ ಗೌಡರವರ ಮನೆಯಲ್ಲಿ ಮಹಾಗಣಪತಿ ಹೋಮ ಸತ್ಯನಾರಾಯಣ ಪೂಜೆ ದುರ್ಗಾ ಹೋಮ ಮತ್ತು ಆಯುಧ ಪೂಜೆ ಅ.22ರಂದು ಜರಗಿತು.
ಈ ಸಂದರ್ಭದಲ್ಲಿ ಕಾವು ಮುಡ್ನೂರುನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸಲಾಯಿತು. ಶ್ರೀ ರಾಮಕೃಷ್ಣ ಫ್ರೌಢಶಾಲಾ ಸಂಚಾಲಕರಾದ ಕಾವು ಹೇಮನಾಥ್ ಶೆಟ್ಟಿಯವರು ಇವರೆಲ್ಲರ ಬಗ್ಗೆ ಅಭಿನಂದನ ಮಾತುಗಳನ್ನಾಡಿದರು. ಧಾರ್ಮಿಕ ಕ್ಷೇತ್ರದಲ್ಲಿ ನಿಧಿಮುಂಡ ಚಂದ್ರಶೇಖರ್ ರಾವ್, ಸಹಕಾರಿ ಕ್ಷೇತ್ರದಲ್ಲಿ ನನ್ಯ ಬಾಲಕೃಷ್ಣ ಕೆದಿಲಾಯ, ಕ್ರೀಡಾ ಕ್ಷೇತ್ರದಲ್ಲಿ ಕಾವು ಪ್ರೇಮನಾಥ್ ಶೆಟ್ಟಿ ಹಾಗೂ ಕಿಶೋರಿ ಪ್ರೇಮನಾಥ್ ಶೆಟ್ಟಿ ದಂಪತಿ, ಸಮಾಜ ಸೇವೆಯಲ್ಲಿ ಶಿವಪ್ರಸಾದ್ ಭಟ್ ಕೊಚ್ಚಿ, ಪಾಕಶಾಸ್ತ್ರದಲ್ಲಿ ಕಂಟ್ರಮಜಲು ಶ್ಯಾಮ್ ಭಟ್, ಅಂಚೆ ಇಲಾಖೆಯ ಶೇಷಪ್ಪ ಗೌಡ ಪರನೀರು, ಅಯ್ಯಪ್ಪ ಭಜನಾ ಮಂದಿರ ಕೆರೆಮಾರು ಇದರ ನಿರ್ಮಾತು ಸುಂದರ ಪೂಜಾರಿ, ಕೃಷಿ ಮತ್ತು ಅಮ್ಚಿನಡ್ಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ಕೆ.ಎಸ್ ಸರ್ವಿಸ್ ಇದರ ಮಾಲಕರಾದ ಸುಧೀರ್ ಕಟ್ಟಪುಣಿ, ಅರಣ್ಯ ಇಲಾಖೆಯ ಶಿವರಾಮ್ ಗೌಡ ಭರಡಿ ಮಜಲು, ರಾಮಕೃಷ್ಣ ರಾವ್ ಮಳಿ, ತಿಮ್ಮಪ್ಪ ಗೌಡ ಕೂರೇಲು, ಕೀರ್ತನ್, ಲೋಕೇಶ್ ಕೂರೇಲು, ಗೋಪಾಲ ಗೌಡ ನೀರ್ಕಜೆ, ನೀರ್ಕಜೆ ತರವಾಡು ಮನೆತನದ ಶೇಷಪ್ಪ ಗೌಡ ನೀರ್ಕಜೆ, ಮೀನಾಕ್ಷಿ ಶೇಷಪ್ಪ ಗೌಡ, ಗಿರಿಜ, ಪುಷ್ಪಕರ, ಭರತ್ ಕದಿಕಡ್ಕ ,ಸತ್ಯ ಕಂಟ್ರಮಜಲು, ಇಂದುಶೇಖರ, ರವಿಕಂಟ್ರಮಜಲು, ತಿರುಮಲ, ಕೀರ್ತನ್ ಕಟ್ಟಪುಣಿ ವಿಠಲ ಗೌಡ, ಆರ್ಯಾಪು ಗ್ರಾ.ಪಂ ಸದಸ್ಯ ಯತೀಶ್ ದೇವ, ಗಿರೀಶ್ ಮಾಡಾವು ಬಾಳೆಗುರಿ, ಗೌತಮ ಜಾಕೆ, ಹರೀಶ್ ನಾಯಕ್ ಮರಿಕೆ, ವನಿತಾ ರಂಜನ್ ಬೆಂಗಳೂರು, ಧರ್ಮೆಂದ್ರ ಕುಂಟಿಕಾನ, ಗಣೇಶ್ ಕಟ್ಟಪುಣಿ, ಸರೋಜಾ ಬಾಳೆಗುರಿ, ಕಿರಣ್ ರಾಜ್ ಎಂ.ಸಿ ದೊಡ್ಡಮನೆ, ರಾಜೇಶ್ ಪಾಲ್ತಾಡು, ವಸಂತ ಕಂಟ್ರಮಜಲು, ಸಾಕ್ಷಿ ಕಂಟ್ರಮಜಲು, ಶಮ ಕಂಟ್ರಮಜಲು, ವಿಶ್ವಾಸ್ ಉಜಿರುಗುಳಿ, ಯಾದವ ಗೌಡ ಸಂಟ್ಯಾರ್, ವಿಶ್ವನಾಥ ಗೌಡ ಸಂಟ್ಯಾರ್, ರಾಮಣ್ಣ ಗೌಡ ಪರನೀರು, ವಿಶ್ವನಾಥ ಗೌಡ ಪರನೀರು, ಶಿವಪ್ರಸಾದ್ ಕಬ್ಬಿನಹಿತ್ತಿಲು, ಶಿಲ್ಪಾ ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.