ಉಪ್ಪಿನಂಗಡಿ: ಜಮಾಬಂದಿ ಸಭೆ

0

ಉಪ್ಪಿನಂಗಡಿ: ಗ್ರಾ.ಪಂ.ನ ಲೆಕ್ಕಪತ್ರಗಳು ಪಾರದರ್ಶಕವಾಗಿರಬೇಕೆನ್ನುವ ಉದ್ದೇಶದಿಂದ ಸರಕಾರ ಜಮಾಬಂದಿ ಕಾರ್ಯಕ್ರಮವನ್ನು ಗ್ರಾ.ಪಂ.ನಲ್ಲಿ ನಡೆಸುತ್ತಿದ್ದು, ಇದರಲ್ಲಿ ಕಾಮಗಾರಿಗಳ ಲೆಕ್ಕಪತ್ರಗಳ ದಾಖಲೆಗಳನ್ನು ಪರಿಶೀಲಿಸುವ ಮುಕ್ತ ಅವಕಾಶ ಗ್ರಾಮಸ್ಥರಿಗಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲೆಕ್ಕಪತ್ರಗಳ ದಾಖಲೆ ಹಾಗೂ ಕಾಮಗಾರಿಗಳ ಪರಿಶೀಲನೆ ನಡೆಸುವ ಮೂಲಕ ಗ್ರಾ.ಪಂ.ನಲ್ಲಿ ಪಾರದರ್ಶಕ ಆಡಳಿತವಿರುವಂತೆ ನೋಡಿಕೊಳ್ಳಬೇಕು ಎಂದು ಅಕ್ಷರ ದಾಸೋಹದ ನಿರ್ದೇಶಕ ವಿಷ್ಣುಪ್ರಸಾದ್ ತಿಳಿಸಿದರು.


ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಅ.27ರಂದು ನಡೆದ ಜಮಾಬಂಧಿ ಸಭೆಯಲ್ಲಿ ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.
ಗ್ರಾ.ಪಂ.ನಲ್ಲಿ ಕಾಮಗಾರಿಗಳ ಕ್ರಿಯಾಯೋಜನೆಯಾಗಿ ಬಳಿಕ ಅದು ಅನುಮೋದನೆಯನ್ನು ಪಡೆದ ಬಳಿಕ ಅನುಷ್ಠಾನಗೊಳ್ಳುತ್ತದೆ. ಕಾಮಗಾರಿ ಸರಿಯಾಗಿ ರೀತಿಯಲ್ಲಿ ನಡೆದಿದೆಯೇ? ಅದಕ್ಕೆ ಖರ್ಚಾದ ಮೊತ್ತ ಹೀಗೆ ಈ ಕಾಮಗಾರಿಯ ದಾಖಲೆಗಳನ್ನು ಪರಿಶೀಲಿಸಲು ಜಮಾಬಂದಿಯಲ್ಲಿ ಅವಕಾಶ ಇದೆ. ಆದ್ದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು. ಗ್ರಾಮಸ್ಥರಾದ ಆದಂ ಕೊಪ್ಪಳ, ಎನ್. ಉಮೇಶ್ ಶೆಣೈ, ಧರ್ನಪ್ಪ ನಾಯ್ಕ, ವಿಶ್ವನಾಥ ಶೆಣೈ ಹಾಗೂ ಗ್ರಾ.ಪಂ. ಸದಸ್ಯರಾದ ವನಿತಾ, ಶೋಭಾ, ಉಷಾ ನಾಯ್ಕ್, ಅಬ್ದುರ್ರಶೀದ್, ಧನಂಜಯ, ಇಬ್ರಾಹೀಂ ಕೆ., ಮುಹಮ್ಮದ್ ತೌಸೀಫ್, ಸಣ್ಣಣ್ಣ, ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.
ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಗುಮಾಸ್ತೆ ಜ್ಯೋತಿ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಗೀತಾ ಬಿ. ವಂದಿಸಿದರು.

ಈ ಜಮಾಬಂದಿಯಲ್ಲಿ ಬೆರಳಿಕೆಯ ಗ್ರಾಮಸ್ಥರಷ್ಟೇ ಭಾಗವಹಿಸಿದ್ದರು. ಲಕ್ಷ ಲಕ್ಷ ಅನುದಾನಗಳ ಕಾಮಗಾರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದ್ದರೂ, ಜಮಾಬಂದಿಯಲ್ಲಿ ಭಾಗವಹಿಸಿ ಈ ಕಾಮಗಾರಿಗಳ ಲೆಕ್ಕಪತ್ರಗಳ ಪರಿಶೀಲನೆಗೆ ಗ್ರಾಮಸ್ಥರು ನಿರಾಸಕ್ತಿ ತೋರಿದಂತಿತ್ತು.

LEAVE A REPLY

Please enter your comment!
Please enter your name here