ಪುತ್ತೂರು: ಮೂಲತಃ ಪುತ್ತೂರಿನವರಾಗಿದ್ದು ಸದ್ಯ ಮಾಡಾವು ನಿವಾಸಿಯಾಗಿರುವ ದಿ.ಅಬುಬಕ್ಕರ್ ಪಟ್ಲ ಮನೆ ಎಂಬವರ ಪುತ್ರ ಮಹಮ್ಮದ್ ರಫೀಕ್ ಪತ್ನಿ ಮರಿಯಮ್ ರಮೀಝಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪರ್ಲಡ್ಕ ನಿವಾಸಿ, ಸಮಸ್ತ ಕೇರಳ ಇಸ್ಲಾಮಿಕ್ ಮತವಿದ್ಯಾಭ್ಯಾಸ ಬೋರ್ಡಿನ ಸದಸ್ಯರಾದ ಅಬ್ದುಲ್ ರಶೀದ್ ಹಾಜಿ ಅವರ ಪುತ್ರಿ ಮರಿಯಮ್ ರಮೀಝಾ ಅವರನ್ನು ಹೆರಿಗೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದಾಗಿ ರಮೀಝಾ ಮೃತಪಟ್ಟಿದ್ದು ಮಗು ಆರೋಗ್ಯವಾಗಿದೆ. ಮೃತರು ಪತಿ ಮತ್ತು ಮೂರು ಮಕ್ಕಳನ್ನು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.