ಪುತ್ತೂರು: ಇಂದು ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದ ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇಲ್ಲಿನ ಅನುಗ್ರಹ ಹಾಲ್ ನಲ್ಲಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ನಲ್ಲಿತಡ್ಕ, ವಲಯ ಸಂಯೋಜಕಿ ಮಹಿತಾ ರೈ ನಡುಬೈಲು, ವಲಯ ಅಧ್ಯಕ್ಷ ಶಿವರಾಮ ಪೂಜಾರಿ ಕೆರೆಮಾರು, ಪದಾಧಿಕಾರಿಗಳಾದ ಸೀತಾರಾಮ ರೈ ಕಲ್ಲಡ್ಕಗುತ್ತು, ತಾರಾನಾಥ ನೂಜಿ ಬೈಲು, ಎಲ್ಲಾ ಘಟಸಮಿತಿಯ ಪದಾಧಿಕಾರಿಗಳು ಮತ್ತು ಸೇವಾಧಿಕ್ಷಿತರಾದ ಅಮೃತಾ, ಭಾಗಿ, ಬಾಬು, ಅನುರಾಧಾ, ನಯನ, ದಿವ್ಯಾ ಉಪಸ್ಥಿತರಿದ್ದರು.
ವಲಯ ಅಧ್ಯಕ್ಷ ಶಿವರಾಮ ಪೂಜಾರಿ ದೀಪ ಬೆಳಗಿಸಿ ಮಾತನಾಡಿ, ವಲಯದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಗಬೇಕು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಒಂದು ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ ಎಂದರು. ಪುತ್ತೂರು ತಾಲೂಕು ಮೇಲ್ವಿಚಾರಕರು ಸವಿತಾ ರೈ ಮಾತನಾಡಿ, ನಾನು ನನ್ನದು ನನ್ನಿಂದ ಎಂಬ ಭಾವನೆ ಶೂನ್ಯ, ಭಗವಂತನ ಕೃಪೆ ಇದ್ದಲ್ಲಿ ನಾವು ಪ್ರಾಮಾಣಿಕವಾಗಿ ದೇವರ ಸೇವೆ ಮಾಡಿದಲ್ಲಿ ಗುರುಗಳ ಕೃಪೆಗೆ ಪಾತ್ರರಾಗುತ್ತೇವೆ. ಈ ಒಂದು ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಲು ನಾವೆಲ್ಲ ಶ್ರಮಿಸೋಣ ಎಂದರು. ಸೀತಾರಾಮ ರೈ ಮಾತನಾಡಿ, ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಲ್ಲಿಯೂ ಕೂಡ ಲೋಪ ಆಗದಂತೆ ಜಾಗೃತೆಯಿಂದ ಕೆಲಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ತಾರಾನಾಥ ನೂಜಿಬೈಲು ಮಾತನಾಡಿ, ಕಾರ್ಯಕ್ರಮ ನಡೆಸಲು ಆರ್ಥಿಕವಾಗಿ ಬಲಗೊಂಡು ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ವಿವರಿಸಿದರು.
ಸಭೆಯಲ್ಲಿ ವಲಯ ಸಂಯೋಜಕಿ ಮಹಿತಾ ರೈ ನಡುಬೈಲು ಕಾರ್ಯಕ್ರಮವನ್ನು ನಿರೂಪಿಸಿದರು. ದೇಲಂಪಾಡಿ ಗ್ರಾಮದ ಸೇವಾದೀಕ್ಷಿತ ಬಾಬು ಸ್ವಾಗತಿಸಿ, ನೆಟ್ಟಣಿಗೆ ಮುಡ್ನೂರು ಗ್ರಾಮದ ಸೇವಾದೀಕ್ಷಿತೆ ಭಾಗಿ ವಂದಿಸಿದರು. ಸಭೆಯಲ್ಲಿ ಸೇವಾದೀಕ್ಷಿತರಾದ ಪೆರ್ಲಂಪಾಡಿ, ಈಶ್ವರಮಂಗಲ, ದೇಲಂಪಾಡಿ, ಅಡೂರು, ಕುಂಟಾರು, ಕರ್ನೂರು, ಮೈಂದನಡ್ಕ, ಪಡುಮಲೆ ಘಟಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.