ಸಬಳೂರು: ಮೇಳೈಸಿದ ಮೆಟ್ರಿಕ್ ಮೇಳ-“ಚಿಣ್ಣರ ಸಂತೆ”

0

ಕಡಬ: ಕೊಯಿಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ʼಮೆಟ್ರಿಕ್ ಮೇಳ – ಚಿಣ್ಣರ ಸಂತೆʼ ನಡೆಯಿತು. ಕಾರ್ಯಕ್ರಮವನ್ನು ಕೊಯಿಲ ಗ್ರಾಮ ಪಂಚಾಯತಿ ಸದಸ್ಯ ಚಿದಾನಂದ ಪಾನ್ಯಾಲ್ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ, ಭಾರತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಎರ್ಮಡ್ಕ, ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ ಗೌಡ , ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಅಮರವಾತ್ಸಲ್ಯ , ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಭರ್ಜರಿ ವ್ಯಾಪಾರ – ವಹಿವಾಟು

ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ದಿನಬಳಕೆಯ ಸಾಮಗ್ರಿಗಳು, ತರಕಾರಿಗಳು, ಸೊಪ್ಪುಗಳು,ಗೆಡ್ಡೆ ಗೆಣಸುಗಳು, ಹಣ್ಣು ಹಂಪಲು, ತಿಂಡಿ ತಿನಿಸುಗಳು, ವಿವಿಧ ಬಗೆಯ ಪಾನೀಯಗಳು ಹೀಗೆ ವಸ್ತುಗಳನ್ನು ಮಾರಾಟ ಮಾಡಿ ಪೋಷಕರ ಮೆಚ್ಚುಗೆ ಗಳಿಸಿದರು. ರಂಗ್ ರಂಗ್ ದ ರಿಂಗ್ ದ ಗೊಬ್ಬು ಹಾಗೂ ಬಾಟಲ್ ಗೆ ಗಾಳ ಆಟಗಳು ವಿಶೇಷ ಗಮನ ಸೆಳೆದವು.

LEAVE A REPLY

Please enter your comment!
Please enter your name here